Advertisement
ಆರೋಪಿಗಳು ಚಿಕ್ಕಜಾಲ ಸಮೀಪದ ಸೇತುವೆ ಕೆಳಗೆ ಅವಿತುಕೊಂಡಿದ್ದ ಬಗ್ಗೆ ದೊರೆತ ಮಾಹಿತಿ ಆಧರಿಸಿ ಬುಧವಾರ ಮುಂಜಾನೆ 5.30ರ ಸುಮಾರಿಗೆ, ಯಲಹಂಕ ಇನ್ಸ್‌ಪೆಕ್ಟರ್ ಮಂಜೇಗೌಡ ಹಾಗೂ ವಿದ್ಯಾರಣ್ಯಪುರ ಠಾಣೆಯ ಇನ್ಸ್‌ಪೆಕ್ಟರ್ ರಾಮಮೂರ್ತಿ ನೇತೃತ್ವದ ವಿಶೇಷ ತನಿಖಾ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಅಧಿಕಾರಿಗಳನ್ನು ನೋಡಿದ ಆರೋಪಿ ಮನೋಜ್, ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹಿಡಿಯಲು ಹೋದ ಪೇದೆಗಳಾದ ಮಹದೇವಸ್ವಾಮಿ ಹಾಗೂ ಉದಯ್ ಕುಮಾರ್‌ಗೆ ಡ್ರ್ಯಾಗರ್‌ನಿಂದ ಇರಿಯಲು ಮುಂದಾಗಿದ್ದಾನೆ.
Related Articles
ಆರೋಪಿ ಕೆಂಚ, ಕೊಲೆಯಾದ ಅರುಣ್‌ಕುಮಾರ್‌ನಿಂದ ಸಾಲ ಪಡೆದಿದ್ದ. ಹಣದ ವ್ಯವಹಾರ ಸಂಬಂಧ ಒಮ್ಮೆ ಜಗಳ ನಡೆದಿದೆ ಎಂದು ತಿಳಿದು ಬಂದಿದ್ದು, ವೈಯಕ್ತಿಕ ದ್ವೇಷದಿಂದ ಕೊಲೆಗೈದಿರುವ ಸಾಧ್ಯತೆಯಿದೆ. ಆರೋಪಿ ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಳಿಕೆ ಪಡೆದುಕೊಳ್ಳಬೇಕಿದೆ. ತಲೆ ಮರೆಸಿಕೊಂಡಿರುವ ಮೂವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸೆ.23ರ ರಾತ್ರಿ 12:30ರ ಸುಮಾರಿಗೆ ಅಲ್ಲಾಳಸಂದ್ರದ ಸಮೀಪ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯಲಹಂಕ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ್‌ನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ವೇಳೆ ಆರೋಪಿಗಳಿಂದ ತಪ್ಪಿಸಿಕೊಂಡಿದ್ದ ಮೃತ ಅರುಣ್ ಕುಮಾರ್‌ನ ಸಂಬಂಧಿ ಅಭಿಷೇಕ್, ಯಲಹಂಕ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement