Advertisement

ಬಿಜೆಪಿ ಗೆಲುವು ನಿಶ್ಚಿತ: ಸಚಿವ ನಿರಾಣಿ

01:02 PM Jun 12, 2022 | Team Udayavani |

ಬೀಳಗಿ: ಮತಕ್ಷೇತ್ರದ ಘಟನಾಯಕರು ಮತ್ತು ಪ್ರಮುಖರು ಈ ಚುನಾವಣೆಯಲ್ಲಿ ಮಾಡುತ್ತಿರುವ ಕಾರ್ಯ ವೈಖರಿಯಿಂದ ಬಿಜೆಪಿ ಅಭ್ಯರ್ಥಿ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ| ಮುರುಗೇಶ ನಿರಾಣಿ ಹೆಳಿದರು.

Advertisement

ಬಿಜೆಪಿ ಬೀಳಗಿ ಮಂಡಲ ಕಾರ್ಯಾಲಯದಲ್ಲಿ ವಾಯವ್ಯ ಪದವೀಧರರ ಮತ್ತು ಶಿಕ್ಷಕರ ಚುನಾವಣೆ ಘಟನಾಯಕರ ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದರು. ನಮ್ಮ ಮತಕ್ಷೇತ್ರದಲ್ಲಿ ಒಟ್ಟು ಪದವೀಧರರ ಮತಗಳು 5 ಸಾವಿರಕ್ಕಿಂತಲೂ ಅಧಿಕ ಮತಗಳಿವೆ. ಮತ್ತು ಶಿಕ್ಷಕರ ಮತಗಳು ನೂರಕ್ಕಿಂತಲೂ ಹೆಚ್ಚಿವೆ. ಈ ಮತಗಳನ್ನು ಘಟನಾಯಕರು ಮತ್ತು ಪ್ರಮುಖರು ಜೂ.13ರಂದು ಪ್ರಥಮ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿಗಳಿಗೆ ಹಾಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಕಳೆದ ಅವಧಿಯಲ್ಲಿ ಪದವೀಧರರ ಅಭ್ಯರ್ಥಿ ಎಚ್‌.ಆರ್‌. ನಿರಾಣಿ ಅವರು ಶಿಕ್ಷಕರ, ಪದವೀಧರರ, ರೈತರ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ವಿಧಾನ ಪರಿಷತ್‌ನಲ್ಲಿ ಧ್ವನಿಯಾಗಿ ಚರ್ಚೆ ಮಾಡಿದ್ದಾರೆ ಎಂದರು.

ಕಳೆದ 12 ವರ್ಷಗಳಿಂದ ಶಿಕ್ಷಕರ ಮತ್ತು ರೈತರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಕಾಳಜಿಯಿಂದ ಕೆಲಸ ಮಾಡಿದ ಅರುಣ ಶಹಾಪುರ ಅವರು ಮೂರನೇ ಬಾರಿ ಸ್ಪರ್ಧಿಸಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿ ಬರುವಂತಹ ಶಿಕ್ಷಕರ ಮತಗಳು ನೂರಕ್ಕಿಂತಲು ಹೆಚ್ಚಿವೆ. ಅವುಗಳನ್ನು ಬಿಜೆಪಿ ಅಭ್ಯರ್ಥಿಗೆ ದೊರೆಯುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದರು.

ಬಿಜೆಪಿಯ ಮಾಜಿ ಅಧ್ಯಕ್ಷ ಎಸ್‌.ಎಂ. ಕಟಗೇರಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಆನಂದ ಇಂಗಳಗಾವಿ, ವಿ.ಜಿ. ರೇವಡಿಗಾರ, ಮೋಹನ ಜಾದವ, ಮಲ್ಲಿ ಕಾರ್ಜುನ ಅಂಗಡಿ, ಪ.ಪಂ ಅಧ್ಯಕ್ಷ ಸಂತೋಷ ನಿಂಬಾಳಕರ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಜಗತ್ತನಾಯಕ ಕಣವಿ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವೀರಣ್ಣ ತೋಟದ ಉಪಸ್ಥಿತರಿದ್ದರು.

ಹೊಳಬಸು ಬಾಳಶೆಟ್ಟಿ ಸ್ವಾಗತಿಸಿದರು. ಶೇಖರ ಗೋಳಸಂಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಗಿರಿಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತವ್ವ ದೊಡಮನಿ, ಈರಣ್ಣ ಗಿಡ್ಡಪ್ಪಗೋಳ, ವಿ.ಜಿ. ರೇವಡಿಗಾರ, ಭೂಸರಡ್ಡಿ, ಮೋಹನ್‌ ಜಾಧವ್‌, ಭೀಮಸಿ ಮೇಲ್ನಾಡ್‌, ಮಲ್ಲಿಕಾರ್ಜುನ ಅಗಡಿ, ಹೊನ್ಯಾಳ, ಮಿಥುನ ದೇಸಾಯಿ, ಆನಂದ ಇಂಗಳಗಾವಿ, ಕೃಷ್ಣಗೌಡ ಪಾಟೀಲ, ನಾರಾಯಣ ಜೋಷಿ, ಗಿರೆಪ್ಪನ್ನ ಕಟಗಿ, ಈರಣ್ಣ ಗಿಡ್ಡಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next