Advertisement

ಯಾರಿಂದಲೂ ಬಿಜೆಪಿ ಶಕ್ತಿ ಒಡೆಯಲು ಆಗಲ್ಲ; ಸಚಿವ ಸುನೀಲ್ ಕುಮಾರ್

04:32 PM Sep 09, 2021 | Team Udayavani |

ಅಫಜಲಪುರ: ಭಾರತೀಯ ಜನತಾ ಪಕ್ಷವನ್ನು ಇನ್ನಷ್ಟು ಪ್ರಬಲಗೊಳಿಸಲು ಬೂತ್‌ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ ಹೇಳಿದರು. ತಾಲೂಕಿನದೇವಲ ಗಾಣಗಾಪುರದಲ್ಲಿ ಬೂತ್‌ ನಂಬರ್‌ 143ರ ಅಧ್ಯಕ್ಷೆ ಮೀನಾಕ್ಷಿ ಶ್ರೀಪಾದ ಮಾಳಗೆ ಅವರ ಮನೆಗೆ ನಾಮಫಲಕ ಹಾಕುವ ಮೂಲಕ ಬಿಜೆಪಿ ಪದಾಧಿಕಾರಿಗಳ ಮನೆಗಳಿಗೆ ನಾಮಫಲಕ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಒಂದು ಕಾಲದಲ್ಲಿ ಬಿಜೆಪಿಯಿಂದ ಒಬ್ಬರಾದರೂ ಗೆಲ್ಲಲಿ ಎಂದು ಗೇಲಿ ಮಾಡುವ ಸಂದರ್ಭವಿತ್ತು. ಈಗ ಬಿಜೆಪಿ ಇಡೀ ದೇಶವನ್ನೇ ಆವರಿಸಿದೆ. ಇಷ್ಟು ದೊಡ್ಡ ಮಟ್ಟಕ್ಕೆ ಪಕ್ಷ ಬೆಳೆಯಲು ಕಾರ್ಯಕರ್ತರ ಶ್ರಮವೇಕಾರಣ. ಆದ್ದರಿಂದ ಪದಾಧಿಕಾರಿಗಳ ಮನೆಗಳಿಗೆ ಫಲಕ ಹಾಕುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಾಸಕ ಬಸವರಾಜ ಮತ್ತಿಮಡು, ಜಿಪಂ ಮಾಜಿ ಅಧ್ಯಕ್ಷ ನಿತೀನ್‌ ಗುತ್ತೇದಾರ, ಯುವ ಮುಖಂಡರಾದ ಕುಶಾಳ ಗುತ್ತೇದಾರ, ಅಪ್ಪಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ನಿಂಗದಳ್ಳಿ, ತಾಲೂಕು ಪ್ರಧಾನಕಾರ್ಯದರ್ಶಿ ಭೀಮರಾಯಕಲಶೆಟ್ಟಿ, ಸುಭಾಷ ಪ್ಯಾಟಿ, ವಿನೋದ ರಾಠೊಡ, ಬಲವಂತಜಕಬಾ, ಸಿದ್ರಾಮಪ್ಪ ಕಲಶೆಟಿ, ಪ್ರಿಯಾಂಕ್‌ ಪೂಜಾರಿ, ಅರೂಣಭಟ್‌ ಪೂಜಾರಿ, ದತ್ತಾತ್ರೇಯ ಪೂಜಾರಿ, ರಾಮಣ್ಣಖರ್ಚಿ, ರಾಜು ಸಬಸಗಿ, ಆನಂದ , ಭಾಗಪ್ಪ ವಡಗೇರಿ, ಮಹಾದೇವ ಬೆಳಗುಂಪಿ, ದತ್ತು ಹೇರೂರ, ದಿಗಂಬರ ಕರ್ಜಗಿ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next