ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಢಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಬೂತ್ ಪ್ರಮುಖರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರು ಶ್ರಮವಹಿಸಿ ಶ್ರದ್ಧೆಯಿಂದ ದುಡಿಯಬೇಕು. ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಮತದಾರರನ್ನು ಸೆಳೆಯಲು ಸೂಕ್ತ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಹೊಸದಾಗಿ ನೋಂದಾಯಿಸಿಕೊಂಡಿರುವ ಮತದಾರರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಬಿಜೆಪಿಯತ್ತ ಸೆಳೆಯಬೇಕು ಎಂದು ಹೇಳಿದರು.
ಇತ್ತೀಚೆಗೆ ಎರಡು ಸಂಸ್ಥೆಗಳು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುವ ಸೀಟುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ ಹಾಗೂ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬರಲು ಕ್ಷಣಗಣನೆ ಪ್ರಾರಂಭವಾಗಿದೆ. ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದರು.
ಶಕ್ತಿ ಕೇಂದ್ರದ ಪ್ರಮುಖ ವರದಿ, ಬೂತ್ ಸಮಿತಿಗಳ ಕಾರ್ಯವೈಖರಿ, ನವಶಕ್ತಿ ಕೇಂದ್ರಗಳ ವರದಿ ಸೇರಿದಂತೆ ನಮಗೆ ಬಂದ ಎಲ್ಲಾ ವರದಿಗಳಲ್ಲೂ ಹೆಬ್ಟಾಳ ಒಂದನೇ ಸ್ಥಾನದಲ್ಲಿದೆ. ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಅವರು 25 ಸಾವಿರಕ್ಕೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಮತದಾನದ ದಿನ ಬೆಳಗ್ಗೆ ಹತ್ತು ಹನ್ನೊಂದು ಗಂಟೆಯೊಳಗೆ ಮತಗಟ್ಟೆ ತಲುಪಬೇಕು. ಮೊದಲ ಎರಡು ಗಂಟೆಗಳ ಕಾಲ ಬೀಳುವ ಮತಗಳೇ ನಿರ್ಣಾಯಕವಾಗುತ್ತವೆ. ಇದರ ಬಗ್ಗೆ ಬೂತ್‌ಮಟ್ಟದ ಪ್ರಮುಖರು ಗಮನ ಹರಿಸುವಂತೆ ಸಲಹೆ ನೀಡಿದರು.
ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಚುನಾವಣೆ ಘೋಷಣೆಗೂ 6 ತಿಂಗಳ ಮೊದಲೇ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ. ಈ ಚುನಾವಣೆಯಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಮ್ಮ ಗುರಿಯಾಗಿದೆ.
ನಮ್ಮ ವಿರೋಧಿ ಅಭ್ಯರ್ಥಿ ಬಿಲಿಯನೇರ್, 417 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿ¨ªಾರೆ. ಚುನಾವಣೆಯಲ್ಲಿ ಹಣದ ಪ್ರಭಾವ ನಿಲ್ಲಬೇಕು. ಹೆಬ್ಟಾಳದಲ್ಲಿ ಮನಿ ಮುಖ್ಯವಲ್ಲ ಮೋದಿ ಮುಖ್ಯ ಎಂದು ಮತದಾರರು ಸಾಬೀತು ಪಡಿಸಲಿ¨ªಾರೆ ಎಂದು ಹೇಳಿದರು.