Advertisement

2022ರಲ್ಲೂ ಬಿಜೆಪಿ ಇರಲಿದೆ, ಮುಂದೆಯೂ ಅಧಿಕಾರವನ್ನ ನಡೆಸಲಿದ್ದೇವೆ: ಸಿಎಂ ಬೊಮ್ಮಾಯಿ

04:16 PM Dec 30, 2021 | Team Udayavani |

ಬೆಂಗಳೂರು: ಬಿಜೆಪಿಯು 2022ರಲ್ಲೂ ಇರಲಿದೆ, 2023ಕ್ಕೂ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದೆಯೂ ಅಧಿಕಾರವನ್ನು ನಡೆಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತ ನಮಗೆ ದೊಡ್ಡ ಪ್ರಮಾಣದ ಯಶಸ್ಸು ಸಿಕ್ಕಿದೆ. ಈ ಭಾಗದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರಿಂದ ನಮಗೆ ಸಾಧನೆ ಮಾಡಲಾಗಿರಲಿಲ್ಲ. ನಮ್ಮ‌ಕ್ಷೇತ್ರದಲ್ಲಿ ಯಾವತ್ತೂ ಕೂಡ ಗೆದ್ದಿರಲಿಲ್ಲ. ನಮ್ಮಲ್ಲಿ ಅಲ್ಪ ಸಂಖ್ಯಾತರು 60% ಇದ್ದಾರೆ ಎಂದರು.

ಇದನ್ನೂ ಓದಿ:ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ…ನಾಗಾಲ್ಯಾಂಡ್‌ನಲ್ಲಿ ಆಫ್ಸಪಾ ಇನ್ನೂ 6 ತಿಂಗಳು ವಿಸ್ತರಣೆ

ಫಲಿತಾಂಶದಿಂದ ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗೆ ಬುಡವೇ ಇಲ್ಲ. ಈಗಾಗಲೇ ಬುಡವೇ ಹೊರಟುಹೋಗಿದೆ. ಗ್ರಾಮ ಪಂಚಾಯತಿಯಲ್ಲಿ ನಾವು ಹೆಚ್ಚಿದ್ದೇವೆ. ಪಟ್ಟಣ ಪಂಚಾಯತಿಯಲ್ಲಿ ಈಗ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೇವೆ. ಅಲ್ಪಸಂಖ್ಯಾತರಿರುವ ಯಾವುದೋ ಕಡೆ ನಗರ ಸಭೆಯಲ್ಲಿ ನಾಲ್ಕು ಸೀಟು ಹೆಚ್ಚು ಪಡೆದಿದ್ದಾರೆ. ಅಷ್ಟಕ್ಕೆ ಗೆದ್ದಿದ್ದೇವೆ ಅಂತ ಬೀಗುವುದು ಬೇಡ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next