Advertisement

ಕಾಂಗ್ರೆಸ್‌ನತ್ತ ಲಿಂಗಾಯತರು,ಸಹಿಸದ ಬಿಜೆಪಿ

03:00 PM May 27, 2017 | |

ಧಾರವಾಡ: ಲಿಂಗಾಯತ ಮತ ಬ್ಯಾಂಕ್‌ ಕಾಂಗ್ರೆಸ್‌ನತ್ತ ಹೊರಳುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ದಲಿತರ ಮನೆಗೆ ಭೇಟಿ ನೀಡುವುದರ ಜೊತೆಗೆ ಕಾಂಗ್ರೆಸ್‌ ನಾಯಕರ ಮೇಲೆ ಸುಳ್ಳು ಆರೋಪಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ, ಪಾಲಿಕೆಯ ಹಿರಿಯ ಸದಸ್ಯ ದೀಪಕ್‌ ಚಿಂಚೋರೆ ಆರೋಪಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಈಗ ಲಿಂಗಾಯತ ಸಮಾಜದ ಪ್ರಮುಖ ನಾಯಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಎಂ.ಬಿ. ಪಾಟೀಲ ಬೆಳೆಯುತ್ತಿದ್ದಾರೆ. ಇದರಿಂದ ಲಿಂಗಾಯತ ಮತಗಳು ಸಹಜವಾಗಿಯೇ ಕಾಂಗ್ರೆಸ್‌ ಪಕ್ಷದತ್ತ ವಾಲುತ್ತಿವೆ.

ಆದರೆ ಇದನ್ನು ಸಹಿಸಿಕೊಳ್ಳಲಾಗದೇ ಮಾನಸಿಕ ಸ್ಥಿರತೆಯನ್ನೇ ಕಳೆದುಕೊಂಡಿರುವ ಬಿಜೆಪಿ ನಾಯಕರು ಈ ಮೂವರ ಹಿಂದೆ ಬಿದ್ದಿದ್ದಾರೆ ಎಂದರು. ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಬಗ್ಗೆ ಈವರೆಗೆ ಮಾತನಾಡದ ಬಿಜೆಪಿ ಮುಖಂಡರು, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಪ್ರಕರಣ ಮತ್ತೆ ಕೆದಕುತ್ತಿದ್ದಾರೆ. 

ಚುನಾವಣೆಯಲ್ಲಿ ಮತ್ತೆ ತಮ್ಮ ಬೆಳೆ ಬೆಳೆಯಿಸಿಕೊಳ್ಳಲು ಈ ರೀತಿಯ ಆಧಾರರಹಿತ ಆರೋಪಗಳಿಗೆ ಬಿಜೆಪಿ ಮುಂಖಡರು ಮಣೆ ಹಾಕುತ್ತಿದ್ದು, ಇದು ಸರಿಯಲ್ಲ ಎಂದು ತಿಳಿಸಿದರು. ಬಿಜೆಪಿ ಅನ್ನೋದು ಬ್ಯಾಂಡ್‌ ಬಾಜಾ ಇದ್ದ ಹಾಗೆ. ಒಂದು ಸಲ ಹೇಳಿದ ಸುಳ್ಳನ್ನೇ ನೂರು ಸಲ ಹೇಳ್ಳೋದು.

ಈ ಕೆಲಸವನ್ನು ನರೇಂದ್ರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಎಸ್‌ವೈ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಮಾಡಿದ್ದಾರೆ. ಇಷ್ಟೆಲ್ಲ ಮಾತನಾಡುವ ಬಿಜೆಪಿಯವರಿಗೆ ತಮ್ಮ ಪಕ್ಷದ ಶಾಸಕ ಅರವಿಂದ ಬೆಲ್ಲದ ಕೈಗೊಂಡಿರುವ ವಿದೇಶ ಪ್ರವಾಸದ ಬಗ್ಗೆ ಮಾತನಾಡಲ್ಲ. ಈ ಬಗ್ಗೆ ಆಕ್ಷೇಪಗಳೂ ಇಲ್ಲ.

Advertisement

ಆದರೆ ಜನರೇ ಇಂತಹವರಿಗೆ ತಕ್ಕ ಪಾಠ ಕಲಿಸಲಿದ್ದು, ಅದಕ್ಕಾಗಿ ಈ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲಾರೆ ಎಂದರು. ಜಿಲ್ಲೆಯಲ್ಲಿ 13 ಕೆರೆ ತುಂಬವ ಯೋಜನೆ ಪ್ರಕ್ರಿಯೆಯಲ್ಲಿವೆ. 70 ಕೋಟಿ ಟೆಂಡರ್‌ ಆಗಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನೂ ಸಂಸದ ಪ್ರಹ್ಲಾದ ಜೋಶಿ ಅವರು ಸಿಆರ್‌ಎಫ್‌ ಯೋಜನೆಯಡಿ ಎಷ್ಟು ಹಣ ಕೇಂದ್ರದಿಂದ ತಂದಿದ್ದಾರೆ ಎಂಬುದಾಗಿ ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು. 

ಪಾಲಿಕೆ ಸದಸ್ಯ ಯಾಸೀನ ಹಾವೇರಿಪೇಟೆ ಮಾತನಾಡಿ, ಕೇಂದ್ರ ಸರಕಾರ ಜನರ ಅಭಿವೃದ್ಧಿ ಬದಲು ಅವರವರ ಪಕ್ಷದ ಎಂಎಲ್‌ಎಗಳಿಗೆ ಆದ್ಯತೆ ನೀಡುತ್ತಿದೆ. ಜಿಲ್ಲೆಯಲ್ಲಿನ ರಸ್ತೆಗಳ ಅಭಿವೃದ್ಧಿಗೆ ಸಿಆರ್‌ಎಫ್ ಯೋಜನೆಯಡಿ ಅನುದಾನ ನೀಡುವಲ್ಲಿ ಭಾರಿ ತಾರತಮ್ಯ ಮಾಡಲಾಗಿದೆ.

ಪ್ರಸಕ್ತ ವರ್ಷ ಜಿಲ್ಲೆಗೆ 452 ಕೋಟಿ ರೂ. ಸಿಆರ್‌ಎಫ್ ಅನುದಾನ ಬಂದಿದ್ದು, ಇದರಲ್ಲಿ ಬಿಜೆಪಿಯವರಿಗೆ ಶೇ.80ರಷ್ಟು ನೀಡಲಾಗಿದೆ. ಜಗದೀಶ ಶೆಟ್ಟರ್‌ ಅವರಿಗೆ 238 ಕೋಟಿ ರೂ., ಅರವಿಂದ ಬೆಲ್ಲದ ಅವರಿಗೆ 163 ಕೋಟಿ ರೂ. ನೀಡಲಾಗಿದೆ. ಉಳಿದಂತೆ ಕಾಂಗ್ರೆಸ್‌ ಶಾಸಕರಾದ ವಿನಯ ಕುಲಕರ್ಣಿ,

ಸಂತೋಷ ಲಾಡ್‌, ಪ್ರಸಾದ ಅಬ್ಬಯ ಅವರಿಗೆ ತಲಾ 8 ಕೋಟಿ ರೂ. ಹಾಗೂ ಸಿ.ಎಸ್‌. ಶಿವಳ್ಳಿ ಅವರಿಗೆ 10 ಕೋಟಿ ಮತ್ತು ಎನ್‌.ಎಚ್‌. ಕೋನರೆಡ್ಡಿ ಅವರಿಗೆ 17 ಕೋಟಿ ರೂ. ನೀಡಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಬಿಜೆಪಿ ಎಷ್ಟೊಂದು ತಾರತಮ್ಯ ಮಾಡುತ್ತಿದೆ ಎಂಬುದು ಗೊತ್ತಾಗಲಿದೆ ಎಂದರು. ಹೆಬ್ಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ ಜೋಶಿ, ಮಹ್ಮದ ಶμà ಕಳ್ಳಿಮನಿ, ಸಿದ್ದಣ ಪ್ಯಾಟಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next