Advertisement

ಸಮಾಜದಲ್ಲಿ ಕೋಮು ದಳ್ಳುರಿಯೇ ಬಿಜೆಪಿ ಕನಸು

01:03 PM Jan 08, 2018 | Team Udayavani |

ನಂಜನಗೂಡು: ನಂಜನಗೂಡು-ಗುಂಡ್ಲುಪೇಡೆಯ ಉಪಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಯ ಜನಪ್ರಿಯತೆ ದಿನ ದಿನಕ್ಕೆ ಕುಸಿಯಲಾರಂಭಿಸಿದ್ದು, ಹತಾಶರಾದ ಬಿಜೆಪಿ ನಾಯಕರೀಗ ರಾಜ್ಯದಾದ್ಯಂತ ಕೊಮುದಳ್ಳುರಿ ಸೃಷ್ಟಿಸುವ ಕನಸು ಕಾಣುವ ನಿಟ್ಟಿನತ್ತ ಪ್ರಯತ್ನ ಕೈಗೊಂಡಿದ್ದಾರೆ ಎಂದು ಸಂಸದ ಆರ್‌.ಧ್ರುವನಾರಾಯಣ ಆರೋಪಿಸಿದರು.

Advertisement

ಜನವರಿ 11 ಗುರುವಾರ ನಂಜನಗೂಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಸಭೆಯ ಯಶಸ್ವಿಗಾಗಿ ಭಾನುವಾರ ಶಾಸಕ ಕಳಲೆ ಕೇಶವ ಮೂರ್ತಿಯವರೊಂದಿಗೆ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ  ಸಭೆ ನಡೆಸಿ ಮಾತನಾಡಿದರು.

ಅಭಿವೃದ್ಧಿಯ ಹರಿಕಾರರಾಗಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರ ಸಾಧನೆ ನಮಗೆಲ್ಲ ಶ್ರೀ ರಕ್ಷೆಯಾಗಿದ್ದು, ಕಳೆದ ಚುನಾವಣೆಯಲ್ಲಿ ನೀಡಿದ ಎಲ್ಲ ವಾಗ್ಧಾನಗಳನ್ನು ಪೂರೈಸಿದ ಹೆಗ್ಗಳಿಕೆ ಕಾಂಗ್ರೆಸ್‌ ಸರ್ಕಾರದ್ದಾಗಿದೆ,

ಸಿಎಂ ಭಾಗವಹಿಸುವ ಸಭೆಯಲ್ಲಿ ವರುಣಾ ಹಾಗೂ ನಂಜನಗೂಡು ವಿಧಾನ ಸಭಾ ಕ್ಷೇತ್ರದ 20.000 ಕ್ಕೂ ಹೆಚ್ಚು ಜನ ಭಾಗವಹಿಸುವುದರ ಮುಖಾಂತರ ಮುಖ್ಯಮಂತ್ರಿಗಳ ಸಭೆಯನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.   

ಕ್ಷೇತ್ರಕ್ಕೆ 600 ಕೋಟಿ ರೂ.ಅನುದಾನ ನೀಡಿದ ಸಿಎಂ ಅಂದು ಶಂಕುಸ್ಥಾಪನೆ ನೇರವೇರಿಸಿದ ಮಿನಿ ವಿಧಾನ ಸೌಧ,  ಹೈ ಟೆಕ್‌ ಬಸ್‌ ನಿಲ್ದಾಣ, 126 ಗ್ರಾಮಗಳ ಕುಡಿಯುವ ನೀರು ಯೋಜನೆಗಳನ್ನು ಅಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಧ್ರುವನಾರಾಯಣ ತಿಳಿಸಿದರು. 

Advertisement

ಕ್ಷೇತ್ರಾಭಿವೃದ್ಧಿಗೆ ಕೇಳಿದಷ್ಟು ಅನುದಾನ: ಸಮಾರಂಭದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಸಕ ಕಳಲೆ, ತಾವು ಚುನಾಯಿತರಾದ ನಂತರ ವಿವಿಧ ಇಲಾಖೆಗಳಿಂದ ಈಗಾಗಲೇ 86 ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದು, ಕೇಳಿದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಕ್ಷೇತ್ರಕ್ಕೆ ಈ ಪಾಟಿ ಅನುದಾನ ನೀಡಿದ ಅವರನ್ನು ಕೃತಜ್ಞತೆಯಿಂದ ನೆನೆಸೋಣವೆಂದರು.

ಕಾರ್ಯಕರ್ತರ ಕಡೆಗಣನೆ: ಉಪಚುನಾವಣೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದುಡಿಸಿಕೊಂಡ ಪಕ್ಷ ಈಗ ಕೈ ಕಾರ್ಯಕರ್ತರನ್ನು ಕಡೆಗಣಿಸಲಾರಭಿಸಿದೆ ಎಂದು ಒಂದಿಬ್ಬರು ನೇರವಾಗಿ ಸಭೆಯಲ್ಲಿ ಆರೋಪಿಸಿದರೆ ಕೆಲವರು ಬ್ಲಾಕ್‌ ಅಧ್ಯಕ್ಷರ ನೇಮಕ ಯಾವಾಗ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕೃಯಿಸಿದ ಧ್ರುವನಾರಾಯಣ ಯಾರನ್ನೂ ಕಡೆಗಣಿಸುವ ಮಾತೇ ಇಲ್ಲಾ, ಕಾರ್ಯಕರ್ತರು ಪಕ್ಷದ ಜೀವಾಳವಾಗಿದ್ದು ನಿಮ್ಮಿಂದಲೇ ಪಕ್ಷದ ಗೆಲವು ಎಂದರು.

ವೇದಿಕೆಯಲ್ಲಿ ಕೈ ಪಕ್ಷದ ಹಿಂದುಳಿದ ವರ್ಗದ ವಿಭಾಗದ ಜಿಲ್ಲಾಧ್ಯಕ್ಷ ಮಾರುತಿ ,ಜಿಪಂ ಸದಸ್ಯೆ ಲತಾಸಿದ್ಧಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕಾಗಲಾವಾಡಿ ಮಾದಪ್ಪ, ಟಿಎಪಿಸಿಎಂಎಸ್‌ ಅಧ್ಯಕ್ಷ ಕುರಿಹುಂಡಿ ಮಹೇಶ, ನಗರಸಭಾ ಅಧ್ಯಕ್ಷ ಪುಷ್ಪಲತಾ, ಕಮಲೇಶ, ನಾಗೇಶರಾಜ್‌, ಚಾಮರಾಜು, ಹಗಿನವಾಳು ಬಸವರ್ಣನ ,ಮಡುವಿನಹಳ್ಳಿ ಶಂಕರಪ್ಪ, ಸೋಮೇಶ, ತಮ್ಮಣ್ಣೇಗೌಡ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next