Advertisement

ಸೀರೆ ಕೊಟ್ಟಿದ್ದೇ ಬಿಜೆಪಿ ಮಹಾ ಸಾಧನೆ

10:54 AM Sep 11, 2017 | Team Udayavani |

ಜೇವರ್ಗಿ: ಕಳೆದ ಬಿಜೆಪಿ ಸರಕಾರ ಅವಧಿಯಲ್ಲಿ ಅನೇಕ ಸಚಿವರು, ಶಾಸಕರು ಭ್ರಷ್ಟಾಚಾರ, ಹಗರಣ ನಡೆಸಿ ರಾಜ್ಯದ
ಮಾನ ಹರಾಜು ಮಾಡಿದ್ದಾರೆ. ಜನಪರ ಯೋಜನೆಗಳನ್ನು ಜಾರಿಗೆ ತರದೇ ಕೇವಲ ಮಹಿಳೆಯರಿಗೇ ಸೀರೆ ವಿತರಣೆ ಮಾಡಿದ್ದೇ ಅವರ 5 ವರ್ಷದ ಮಹಾ ದೊಡ್ಡ ಸಾಧನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ವ್ಯಂಗ್ಯವಾಡಿದರು.

Advertisement

ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಜೇವರ್ಗಿ-ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ
ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಅವರಿಗೆ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ. ಕೇಂದ್ರದ ಮೋದಿ ಸರಕಾರ ಸುಳ್ಳು ಭರವಸೆ ನೀಡಿ ದೇಶದ ಬಡವರ, ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ಎಸಗಿದೆ. ಮೋದಿಯವರ ಅಭಿವೃದ್ಧಿ ಸಪ್ನಾ ಬನ್‌ ಗಯಾ ಎನ್ನುವಂತೆ ಆಗಿದೆ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಕೇಂದ್ರದ ಮೂರು ವರ್ಷದ ಲೆಕ್ಕ ಕೊಟ್ಟರೆ ರಾಜ್ಯದ ನಾಲ್ಕು ವರ್ಷದ ಲೆಕ್ಕ ಕೊಡಲು ಸಿದ್ಧ ಎಂದರು.

ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಡಾ| ಶೈಲಜಾನಾಥ ಸಾಕೆ, ಬಿಜೆಪಿ ನೀತಿ,
ನಿಯಮ ಇಲ್ಲದ ಪಕ್ಷ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಕುರುಕ್ಷೇತ್ರವಾಗಲಿದೆ. ಭ್ರಷ್ಟ
ಬಿಜೆಪಿ ಸರಕಾರವನ್ನು ಅಧಿಕಾರದಿಂದ ದೂರ ಇಡಲು ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದ ಸಾಧನೆ ಮನೆ ಮನೆಗೆ
ತಿಳಿಹೇಳಬೇಕು ಎಂದರು.

ಇದಕ್ಕೂ ಮುನ್ನ ಪತ್ರಕರ್ತೆ ಗೌರಿ ಲಂಕೇಶ ಹಾಗೂ ಮಾಜಿ ಸಿಎಂ ಧರ್ಮಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಶಾಸಕ ಡಾ| ಅಜಯಸಿಂಗ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಲ್ಲಮಪ್ರಭು ಪಾಟೀಲ, ವಸಂತಕುಮಾರ, ಗೌತಮ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭಾಗಣಗೌಡ ಸಂಕನೂರ, ಕಲಬುರಗಿ ಮೇಯರ್‌ ಶರಣುಕುಮಾರ ಮೋದಿ, ಬಸವರಾಜ ಪಾಟೀಲ ಊಡಗಿ,
ಅಮƒತರಾಯಗೌಡ ವಡಗೇರಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ
ರುಕುಂ ಪಟೇಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇವರ್ಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ
ಸ್ವಾಗತಿಸಿದರು, ಮುಖಂಡ ರಾಜಶೇಖರ ಸೀರಿ ನಿರೂಪಿಸಿದರು, ಭಗವಂತ್ರಾಯ ಬೆಣ್ಣೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next