Advertisement

ಬೀರ್‌ಬಲ್‌ ಈಗ ಇನ್ನಷ್ಟು ಟ್ರಿಮ್‌

05:47 AM Jan 24, 2019 | |

ಶ್ರೀನಿ ನಿರ್ದೇಶಿಸಿ, ನಟಿಸಿದ್ದ “ಬೀರ್‌ಬಲ್‌’ ಚಿತ್ರ ನೋಡಿದವರು ಮೆಚ್ಚಿಕೊಂಡಿದ್ದರು. ಆದರೆ, ಮೆಚ್ಚುಗೆಯ ಜೊತೆಗೆ ಸಿನಿಮಾದ ಅವಧಿ ತುಸು ಹೆಚ್ಚಾಯ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ನೋಡುಗರ ಪ್ರತಿಕ್ರಿಯೆ ಗಮನಿಸಿದ ಚಿತ್ರತಂಡ, ಇದೀಗ ಚಿತ್ರಕ್ಕೆ ಸ್ವಲ್ಪ ಕತ್ತರಿ ಪ್ರಯೋಗಿಸಿದೆ.

Advertisement

ಹೌದು, ಸಿನಿಮಾ ಅವಧಿ ಹೆಚ್ಚಾಯ್ತು ಎಂಬ ಮಾತುಗಳು ಯಾವಾಗ ಎಲ್ಲೆಡೆ ಕೇಳಿಬಂದವೋ, ಅದನ್ನು ಅರಿತುಕೊಂಡ ಚಿತ್ರತಂಡ, ಸುಮಾರು 20 ನಿಮಿಷಗಳ ಕಾಲ ಚಿತ್ರಕ್ಕೆ ಕತ್ತರಿ ಹಾಕಿದೆ. ಈಗ ಚಿತ್ರದ ವೇಗ ತುಸು ಹೆಚ್ಚಾಗಿದ್ದು, ಪ್ರೇಕ್ಷಕರಿಗೆ ಅವಧಿ ಹೆಚ್ಚಾಯ್ತು ಎನಿಸುವುದಿಲ್ಲ ಎಂಬುದು ಚಿತ್ರತಂಡದ ಮಾತು.

ಅಂದಹಾಗೆ, “ಬೀರ್‌ಬಲ್‌’ ಚಿತ್ರದ ಮೊದಲ ಕೇಸು “ಫೈಂಡಿಂಗ್‌ ವಜ್ರಮುನಿ’ ಭಾಗ ಬಿಡುಗಡೆಯಾದ ಎಲ್ಲೆಡೆಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಕ್ಕೆ ಹೆಚ್ಚು ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರಮಂದಿರಗಳಲ್ಲೂ “ಬೀರ್‌ಬಲ್‌’ ಪ್ರಯತ್ನವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಇನ್ನು, ಎರಡನೇ ವಾರಕ್ಕೆ ಕಾಲಿಟ್ಟಿರುವ “ಬೀರ್‌ಬಲ್‌’, ಸುಮಾರು 100ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂಬುದು ನಿರ್ದೇಶಕ ಶ್ರೀನಿ ಅವರ ಮಾತು. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಟಿ.ಆರ್‌. ಚಂದ್ರಶೇಖರ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್‌, ಕವಿತಾ, ಸುರೇಶ್‌ ಹೆಬ್ಳೀಕರ್‌, ಮಧುಸೂದನ್‌ ಸೇರಿದಂತೆ ಹಲವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next