Advertisement

ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆ ಆರಂಭ

07:17 PM May 01, 2020 | Suhan S |

ಭಟ್ಕಳ: ಕೋವಿಡ್‌-19 ಪ್ರಕರಣ ಕಾಣಿಸಿಕೊಳ್ಳುತ್ತಿರುವಂತೆಯೇ ಭಟ್ಕಳ ತಾಲೂಕು ಆಸ್ಪತ್ರೆ ಕೋವಿಡ್‌-19  ಆಸ್ಪತ್ರೆಯಾಗಿ ಮಾರ್ಪಟ್ಟಿದ್ದು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು.

Advertisement

ಇದೀಗ ಕೋವಿಡ್‌-19  ಮುಕ್ತವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಚಿಕಿತ್ಸೆಗೆ ಮುಂದಾಗಿದ್ದು ತಕ್ಷಣದಿಂದಲೇ ಆರಂಭವಾಗಲಿದೆ. ಇಲ್ಲಿ ಕೋವಿಡ್‌-19  ದೃಢಪಟ್ಟವರನ್ನು ಕಾರವಾರದ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಅನೇಕ ಸುಧಾರಣೆ ತಂದ ಡಾ| ಸವಿತಾ ಕಾಮತ್‌ ಕೋವಿಡ್‌-19 ಪ್ರಕರಣ ಬಂದಾಗಿನಿಂದ ದಿನದ 18 ಗಂಟೆ ಆಸ್ಪತ್ರೆಯಲ್ಲಿಯೇ ಇದ್ದು ಎಲ್ಲಾ ಪ್ರಕರಣಗಳನ್ನು ಉತ್ತಮವಾಗಿ ನಿಭಾಯಿಸಿ ಕೋವಿಡ್‌-19  ಮುಕ್ತವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಸುಮಾರು 20 ದಿನಗಳಿಂದ ಭಟ್ಕಳದಲ್ಲಿ ಯಾವುದೇ ಕೋವಿಡ್‌-19  ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಮತ್ತೆ ಮೊದಲಿನಂತೆಯೇ ಎಲ್ಲ ತರಹದ ಚಿಕತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ರೋಗಗಳ ತಜ್ಞರಿದ್ದರೂ ಕೂಡಾ ಕಳೆದ ಹಲವಾರು ದಿನಗಳಿಂದ ಅವರ ಸೇವೆಯಿಂದ ನಾಗರಿಕರು ವಂಚಿತರಾಗಿದ್ದರು. ಕೇವಲ ಹೆರಿಗೆಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಇಲ್ಲಿನ ಪ್ರಸೂತಿ ತಜ್ಞೆಯನ್ನು ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿತ್ತು.  ಎಲ್ಲಾ ತಜ್ಞ ವೈದ್ಯರೂ ಇದೀಗ ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಲಭ್ಯವಾಗಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next