Advertisement

ಕೆರೆಯಂಚಿನ ಬಾಂಗ್ಲಾ ವಲಸಿಗರತೆರವಿಗೆ ಮುಂದಾದ ಬಿಬಿಎಂಪಿ

12:16 PM Jun 01, 2017 | Team Udayavani |

ಮಹದೇವಪುರ: ವರ್ತೂರು ಕೆರೆ ತಟದಲ್ಲಿ ಟೆಂಟ್‌ ಹಾಕಿ ಜೀವನ ನಡೆಸುತ್ತಿರುವ ಬಾಂಗ್ಲಾ ನುಸುಳುಕೋರರನ್ನು ಸ್ಥಳಾಂತರಿಸಲು ಬಿಬಿಎಂಪಿ ಮುಂದಡಿ ಇಟ್ಟಿದೆ. ಕೆರೆಗೆ ತ್ಯಾಜ್ಯ ಸುರಿಯುತ್ತಿರುವ ಆರೋಪಗಳು ಇವರ ಮೇಲಿರುವುದರಿಂದ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ. 

Advertisement

ಕೆರೆ ಅಂಚಿನಲ್ಲಿ ವಾಸವಾಗಿರುವ ಬಾಂಗ್ಲಾ ನಸುಳುಕೋರರು ರಸ್ತೆಗಳು, ಖಾಲಿ ಪ್ರದೇಶದಲ್ಲಿನ ಪ್ಲ್ರಾಸ್ಟಿಕ್‌ ಮತ್ತು ಇನ್ನಿತರೇ ತ್ಯಾಜ್ಯವನ್ನು ಆಯ್ದು ಅವುಗಳನ್ನು ಮಾರುವ ವೃತ್ತಿ ನಡೆಸುತ್ತಿದ್ದಾರೆ. ಮಾರಾಟವಾಗದ ತ್ಯಾಜ್ಯವನ್ನು ವರ್ತೂರು ಕೆರೆಗೆ ಸುರಿಯುತ್ತಿದ್ದಾರೆ ಎಂಬ ದೂರುಗಳು ಇವರ ಮೇಲಿದೆ.

ಹೀಗಿರುವಾಗಲೇ ಮಂಗಳವಾರ ವರ್ತೂರು ಕೆರೆ ಪ್ರದೇಶದ ರಾಜಕಾಲುವೆಯಲ್ಲಿ ಕಸಕ್ಕೆ ಬೆಂಕಿ ಹೊತ್ತಿಕೊಂಡು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತಿರುವ ಬಿಬಿಎಂಪಿ ಅಧಿಕಾರಿಗಳು, ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್‌ ನೇತೃತ್ವದಲ್ಲಿ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ.

ಅಧಿಕಾರಿಗಳ ಭೇಟಿ ವೇಳೆ ಶೆಡ್‌ಗಳಲ್ಲಿ ವಾಸಿಸುತ್ತಿದ್ದವರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸಲಾಯಿತು. ಆದರೆ, ಇವರೆಲ್ಲ ಅಕ್ರಮ ವಲಸಿಗರು ಎಂಬುದು ತಿಳಿದುಬಂದಿದೆ. ಮಾನವೀಯತೆ ದೃಷ್ಟಿಯಿಂದ ಎರಡು ದಿನಗಳ ಕಾಲವಕಾಶ ನೀಡಲಾಗಿದ್ದು, ಕೆರೆ ಅಂಚಿನಿಂದ ಬೇರೆಡೆಗೆ ಸ್ಥಳಾಂತರವಾಗುವಂತೆ ಅವರಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next