Advertisement

ಮತ್ತೆ ಮಿಂಚುತ್ತಿರುವ ಕೈಮಗ್ಗದ ಉಡುಪಿ ಸೀರೆ

10:00 AM Jul 04, 2019 | sudhir |

ಉಡುಪಿ: ಜಾಗತೀಕರಣ ಪ್ರಭಾವದಿಂದ ತೆರೆಮರೆಗೆ ಸರಿದಿದ್ದ ಉಡುಪಿ ಕೈಮಗ್ಗ ಉದ್ಯಮ ಮತ್ತೆ ಚಿಗುರಿದ್ದು, ಇಲ್ಲಿನ ಸೀರೆಗಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗತೊಡಗಿದೆ.

Advertisement

ನೇಕಾರರ ಸಂಖ್ಯೆ 40ಕ್ಕೆ ಕುಸಿತ

ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ 1912ರಲ್ಲಿ ತಲಾ ನಾಲ್ಕು ನೇಕಾರರ ಸಹಕಾರಿ ಸಂಘ ಪ್ರಾರಂಭವಾಗಿದ್ದು, 1990ರಲ್ಲಿ ನೇಕಾರರ ಸಂಖ್ಯೆ 4 ಸಾವಿರಕ್ಕೆ ಏರಿಕೆಯಾಗಿತ್ತು. 2005-2006ರವರೆಗೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ 833 ಕಾರ್ಯನಿರತ ಕೈಮಗ್ಗಗಳಿದ್ದವು.

ಆದರೆ 2019ರಲ್ಲಿ ನೇಕಾರಿಕೆ ಕೇವಲ 40 ಮಂದಿ ಸೀಮಿತವಾಗಿದೆ. ಪ್ರಸ್ತುತ ಕಾರ್ಕಳದ ಕದಿಕೆ ಟ್ರಸ್ಟ್‌ ಹಾಗೂ ಸಾಗರದ ಚರಕ ಗ್ರಾಮೋದ್ಯೋಗ ಸಂಸ್ಥೆ ಜತೆಯಾಗಿ ಜಿಐ ಮಾನ್ಯತೆಯ ನೈಸರ್ಗಿಕ ಬಣ್ಣದ ಉಡುಪಿ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸ ಬಗೆಯ ಅವಕಾಶಕ್ಕೆ ತೆರೆದುಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಬೇಡಿಕೆ ಇದೆ

Advertisement

ನೈಸರ್ಗಿಕ ಬಣ್ಣದ ಕೈಮಗ್ಗ ಸೀರೆಗಳು ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುವುದರಿಂದ ಹಾಗೂ ಚರ್ಮಕ್ಕೆ ಹಾನಿಕಾರಕವಲ್ಲ. ಇದರಿಂದಾಗಿ ಯುವಜನತೆ ಸೀರೆ ಖರೀದಿಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಯುವತಿ ಯರು, ಶಿಕ್ಷಕಿಯರು, ಅಧಿಕಾರಿಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ.

ಯಕ್ಷಗಾನ ಸೀರೆಗೆ ಬೇಡಿಕೆ

ಶಿವಳ್ಳಿ ಸಂಘದಲ್ಲಿ ಕೈಮಗ್ಗ ಸೀರೆ, ಯಕ್ಷಗಾನ ಸೀರೆ, ಬಸ್ರೂರು ಸಂಘದಲ್ಲಿ ಬಾತ್‌ಟವೆಲ್, ಚೌಕ, ಬ್ರಹ್ಮಾವರ ಸಂಘದಲ್ಲಿ ಬೈರಾಸು, ಕಸೆಸೀರೆ (ಯಕ್ಷಗಾನ ಸೀರೆ), ಪಾಣಿಪಂಚೆ, ಉಡುಪಿ ಸಂಘದಲ್ಲಿ 80 ಮತ್ತು 60 ಕೌಂಟ್ಸ್‌ ಕೈಮಗ್ಗ ಸೀರೆಗಳ ಮಾರಾಟ ನಡೆಯುತ್ತಿದೆ.

ಉತ್ತಮ ವ್ಯವಹಾರ

ತಾಳಿಪಾಡಿ ಸೊಸೈಟಿ 8 ಲಕ್ಷ ವಾರ್ಷಿಕ ವ್ಯವಹಾರ ಮಾಡುತ್ತಿದ್ದು, ಅವಿಭಜಿತ ಜಿಲ್ಲೆಯಲ್ಲಿ 20 ಲ.ರೂ., ಕೈಮಗ್ಗ ಸೀರೆಗಳ ವಹಿವಾಟು ನಡೆಸಲಾಗುತ್ತಿದೆ. ಇದನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಚರಕ ಸಂಸ್ಥೆ ಹಾಗೂ ಕದಿಕೆ ಟ್ರಸ್ಟ್‌ ಕಾರ್ಯಪ್ರವೃತ್ತವಾಗಿದೆ.

ಯುವ ನೇಕಾರರಿಗೆ ತರಬೇತಿ

ಯುವ ನೇಕಾರರಿಗೆ ಮುಂದಿನ ವಾರ ನೈಸರ್ಗಿಕ ಬಣ್ಣ ಅಳವಡಿಕೆ ತರಬೇತಿ ನೀಡಲಾಗುತ್ತಿದೆ. ಜತೆಗೆ ಯುವಪೀಳಿಗೆ ಪರಂಪರಾಗತ ವೃತ್ತಿ ಮುಂದುವರಿಸುವ ನಿಟ್ಟಿನಲ್ಲಿ ಪ್ರೋತ್ಸಾಹ, ಸೂಕ್ತ ಸಂಭಾವನೆ, ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಾಳಿಪಾಡಿ ಸೊಸೈಟಿ ಸಿಇಒ ಮಾಧವ ಶೆಟ್ಟಿಗಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next