ಮಧೂರು: ಆನೆಕಾಲು ಮತ್ತು ಲಿಂಫೆಡಿಮಾಗೆ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶದೊಂದಿಗೆ ನಿರ್ಲಕ್ಷ್ಯಕ್ಕೊಳಗಾಗಿ ಬಳಲುತ್ತಿರುವ ಆನೆಕಾಲು ರೋಗಿಗಳ ಆತ್ಮ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಉಳಿಯತ್ತಡ್ಕದಲ್ಲಿರುವ ಐಎಡಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿರುವ 9ನೇ ರಾಷ್ಟ್ರೀಯ ವಿಚಾರ ಸಂಕಿರಣದದಲ್ಲಿ ಕೇಂದ್ರ ಆಯುಷ್ ಖಾತೆಯ ಕಾರ್ಯದರ್ಶಿ ಪದ್ಮಶ್ರೀ ವೈದ್ಯ ರಾಜೇಶ್ ಕೋಟೇಚ ಅವರು ಸಂದೇಶವನ್ನು ಬಿಡುಗಡೆಗೊಳಿಸಿದರು.
ಆನೆಕಾಲು ರೋಗ ಚಿಕಿತ್ಸೆಗೆ ಐಎಡಿ ಪ್ರಸ್ತುತಪಡಿಸಿರುವ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಕೇಂದ್ರ ಆಯುಷ್ ಇಲಾಖೆ ಪರಿಗಣಿಸಿ ದೇಶದ ಮೂಲೆ ಮೂಲೆಗಳಿಗೂ ತಲಪಿಸುವ ಕಾರ್ಯಗಳಿಗೆ ಸಚಿವಾಲಯ ಒತ್ತು ನೀಡುವುದಾಗಿ ಅವರು ಈ ಸಂದರ್ಭ ಹೇಳಿದರು.
ಆನೆಕಾಲು ಮತ್ತು ಲಿಂಫೆಡಿಮಾ ಚಿಕಿತ್ಸೆ ಮತ್ತು ಚರ್ಮದ ಆರೋಗ್ಯ ಕಾಪಾಡುವತ್ತ ಐಎಡಿಯ ಚಿಕಿತ್ಸಾ ವಿಧಾನದಿಂದ ಐರೋಪ್ಯ ರಾಷ್ಟ್ರಗಳ ತಜ್ಞರು ಕಲಿಯಬೇಕಾದುದು ಸಾಕಷ್ಟು ಇದೆ ಎಂದು ಲಂಡನ್‌ನ ಸೈಂಟ್ ಜೋರ್ಜ್ ವಿವಿಯ ಚರ್ಮರೋಗ ವಿಭಾಗದ ಪ್ರೊ|ಪೀಟರ್ ಮೋರ್ಟಿಮರ್ ಉಪಸ್ಥಿತರಿದ್ದು ತಿಳಿಸಿದರು.
ರಾಷ್ಟ್ರದ ವಿವಿಧೆಡೆಗಳಿಂದ ಆಗಮಿಸಿದ ಆನೆಕಾಲು ರೋಗದಿಂದ ತಾವು ಪಟ್ಟ ಬವಣೆಗಳು ಮತ್ತು ಐಎಡಿಯ ಚಿಕಿತ್ಸಾ ವಿಧಾನದಿಂದ ಲಭಿಸಿದ ರೋಗ ಶಮನದ ಅನುಭವಗಳನ್ನು ಈ ಸಂದರ್ಭ ತಜ್ಞರೊಂದಿಗೆ ಹಂಚಿಕೊಂಡರು. ಆನೆಕಾಲು ರೋಗಿಗಳಿಗೆ ಅಂಗವಿಕಲತೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟವರು ನೀಡಿ ಅವರಿಗೆ ಅಗತ್ಯದ ಅನುಕೂಲತೆಗಳನ್ನು ನೀಡುವ ಅಗತ್ಯವಿದೆ ಎಂದು ಗುಜರಾತ್‌ನ ಜಾಮ್‌ನಗರ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುವೇಟ್ ಟೀಚಿಂಗ್ ಆಂಡ್ ರಿಸರ್ಚ್‌ನ ಮಾಜಿ ನಿರ್ದೇಶಕ ಪ್ರೊ| ಎಂ. ಎಸ್. ಬಘೇಲ್ ಆಗ್ರಹಿಸಿದರು. ಐಎಡಿಯಲ್ಲಿ ಆನೆಕಾಲು ರೋಗದ ಚಿಕಿತ್ಸೆ ಪಡೆದವರಿಗೆ ಗುರುತು ಚೀಟಿ ನೀಡುವ ಕುರಿತು ಗಮನಹರಿಸಬೇಕೆಂಬ ಬೇಡಿಕೆಯನ್ನು ಈ ಸಂದರ್ಭ ರೋಗಿಗಳೂ ಮುಂದಿರಿಸಿದರು. ಐಎಡಿಯ ಹೋಮಿಯೋ ತಜ್ಞೆ ಡಾ| ಖೈರುಲ್ ಖುರ್ಷಿದಾ ತಜ್ಞರೊಂದಿಗೆ ರೋಗಿಗಳನ್ನೊಳಗೊಂಡು ಸಂವಾದ ನಡೆಸಿದರು.
ಆನೆಕಾಲು ರೋಗ ಮತ್ತು ಅದರ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿ ಐಎಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನೆಕಾಲು ರೋಗಿಗಳ ಜಾಗೃತಿಗಾಗಿ ಕಾಲ್ನಡಿಗೆ ಜಾಥಾ ಐಎಡಿ ಸಂಶೋಧನಾ ಕೇಂದ್ರದಿಂದ ಹೊರಟು ಉಳಿಯತ್ತಡ್ಕ ಜಂಕ್ಷನ್ ವರೆಗೆ ಬೆಳಿಗ್ಗೆ ನಡೆಯಿತು.
ಲಂಡನ್ ಓಕ್ಸ್‌ಫರ್ಡ್ ವಿವಿಯ ಪ್ರೊ| ಟೆರೆನ್ಸ್ ಜೆ.ರೆಯಾನ್, ಪ್ರೊ| ಎಂ.ಎಸ್.ಬಘೇಲ್, ಪ್ರೊ| ಪೀಟರ್ ಮೋರ್ಟಿಮೋರ್, ಐಎಡಿ ನಿರ್ದೇಶಕ ಡಾ| ಎಸ್.ಆರ್. ನರಹರಿ, ಡಾ| ಪ್ರಸನ್ನ ಕೆ.ಎಸ್, ಮೊದಲಾದವರು ಜಾಥಾದಲ್ಲಿ ಭಾಗವಹಿಸಿದರು.
ಈ ಸಂದರ್ಭ ಬೈಕ್ ರ್ಯಾಲಿಯನ್ನು ಪದ್ಮಶ್ರೀ ವೈದ್ಯ ರಾಜೇಶ್ ಕೋಟೇಚ ಉದ್ಘಾಟಿಸಿದರು. ಬಳಿಕ ವಿವಿಧ ತಜ್ಞರಿಂದ ರೋಗಿಗಳ ವೈದ್ಯಕೀಯ ಶಿಬಿರ, ಪ್ರಾತ್ಯಕ್ಷಿಕೆಗಳು ನಡೆದವು.
ಆನೆಕಾಲು ರೋಗ ಚಿಕಿತ್ಸೆಗೆ ಐಎಡಿ ಪ್ರಸ್ತುತ ಪಡಿಸಿರುವ ಸಂಯೋಜಿತ ಚಿಕಿತ್ಸಾ ವಿಧಾನ ವನ್ನು ಕೇಂದ್ರ ಆಯುಷ್ ಇಲಾಖೆ ಪರಿ ಗಣಿಸಿ ದೇಶದ ಮೂಲೆ ಮೂಲೆಗಳಿಗೂ ತಲಪಿಸುವ ಕಾರ್ಯ ಗಳಿಗೆ ಸಚಿವಾ ಲಯ ಒತ್ತು ನೀಡುವುದಾಗಿ ವೈದ್ಯ ರಾಜೇಶ್ ಕೋಟೇಚ ಅವರು ಹೇಳಿದರು.