Advertisement

ವಿಶ್ವಕ್ಕೆ ಕಲೆ ಕೊಂಡೊಯ್ದ ಕೀರ್ತಿಬಳ್ಳಾರಿ ರಾಘವರದ್ದು: ರಾಜಪ್ಪ

10:41 AM Aug 06, 2018 | Team Udayavani |

ಬಳ್ಳಾರಿ: ನಾಟ್ಯಕಲಾ ಪ್ರಪೂರ್ಣ ಬಳ್ಳಾರಿಯ ರಾಘವರು ತಮ್ಮ ಅದ್ಭುತ ನಟನೆಯ ಮೂಲಕ ನಾಟಕ ರಂಗದ
ಘನತೆಯನ್ನು ಇಡೀ ವಿಶ್ವಕ್ಕೆ ಕೊಂಡೊಯ್ದಿದ್ದಾರೆ. ಅವರನ್ನು ಎಷ್ಟು ನೆನೆದರೂ ಸಾಲದು ಎಂದು ಪ್ರೊ| ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.

Advertisement

ನಗರದ ರಾಘವ ಕಲಾಮಂದಿರದಲ್ಲಿ ರಾಘವರ 38ನೇ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಸಮಾರಂಭಕ್ಕೆ
ಚಾಲನೆ ನೀಡಿ ಮಾತನಾಡಿದ ಅವರು, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ನಟಿಸಿದ ಅವರು, ಭಾಷಾ ಸಾಮರಸ್ಯವನ್ನು ರಾಘವರು ಸಾಧಿಸಿದ ಘನತೆ ರಾಘವರಿಗೆ ಸಲ್ಲಲಿದೆ. ರಾಘವರು ಪಂಚ ಭಾಷೆಗಳಲ್ಲಿ ನಟಿಸಿರುವುದು
ಅಷ್ಟೇ ಅಲ್ಲ, ನಾಟಕ ರಂಗದ ಸುಧಾರಣೆಗೆ ಅದ್ಭುತವಾದ ಕೊಡುಗೆಗಳನ್ನು ನೀಡಿ ದೇಶದಲ್ಲೇ ಮಾದರಿಯಾಗಿದ್ದರು. ಈ
ಹಿನ್ನೆಲೆಯಲ್ಲಿ ಅವರ ಬಗ್ಗೆ ಅಪಾರ ಸಂಶೋಧನೆಯಾಗಬೇಕು ಎಂದು ತಿಳಿಸಿದರು. ಹೆಸರಾಂತ ರಂಗಭೂಮಿ ನಟಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಚ್‌.ಬಿ.ಸರೋಜಮ್ಮ ಮಾತನಾಡಿ, ಸಾಕಷ್ಟು ಅರ್ಹ ಬಡ ಕಲಾವಿದರು ಅಪಾರ ಸಾಧನೆ ಮಾಡಿ ರಂಗಭೂಮಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಣಕಾಸಿನಲ್ಲಿ ಬಡವರಿರಬಹುದು, ಆದರೆ, ಕಲೆಯಲ್ಲಿ ಶ್ರೀಮಂತರಾಗಿದ್ದಾರೆ. ಎಲ್ಲರನ್ನೂ ಗುರುತಿಸಿ ಪ್ರತಿಯೊಬ್ಬರೂ
ಗೌರವಿಸಿ ಸನ್ಮಾನಿಸಿ, ಪ್ರೋತ್ಸಾಹಿಸಬೇಕು. ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸಾಕಷ್ಟು ಜನ ಅರ್ಹ
ಕಲಾವಿದರಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, ಬಳ್ಳಾರಿಯ ರಾಘವರು ರಾಜ್ಯ ಸೇರಿದಂತೆ
ನಾನಾ ಕಡೆ ಉತ್ತಮ ಹೆಸರುಗಳಿಸಿದ್ದು, ಪ್ರತಿಯೊಬ್ಬರೂ ಅವರನ್ನು ನೆನೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next