Advertisement

ಬ್ಯಾಂಕ್‌ ಗ್ರಾಹಕರ ಹಣ ಕದಿಯುತ್ತಿದ್ದವರ ಬಂಧನ

11:16 AM Nov 05, 2017 | Team Udayavani |

ಬೆಂಗಳೂರು: ಬ್ಯಾಂಕ್‌ಗೆ ಬರುವ ಗ್ರಾಹಕರ ಗಮನ ಬೇರೆಡೆ ಸೆಳೆದ ಹಣ ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ಓಜಿಕುಪ್ಪಂ ತಂಡದ ಇಬ್ಬರು ಸದಸ್ಯರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರಿನ ಸುರೇಶ್‌ (35) ಮತ್ತು ಶ್ರೀನಿವಾಸಲು (43) ಬಂಧಿತರು. 

Advertisement

ಆರೋಪಿಗಳಿಂದ 9 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮತ್ತಿಕೆರೆಯ ಎಚ್‌ಎಂಟಿ ಮುಖ್ಯರಸ್ತೆಯಲ್ಲಿರುವ ಕೆಂಪಾಪುರ ದಾಸರಹಳ್ಳಿಯ ಜಾನ್‌ ಎಂಬುವರ ಕಾರು ಗಾಜು  ಹೊಡೆದು 1.40 ಲಕ್ಷ ರೂ. ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನ ಓಜಿಕುಪ್ಪಂನ ಗ್ರಾಮದಲ್ಲಿ ಶೇ.60ರಷ್ಟು ಮಂದಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, 4-6 ಮಂದಿಯ ತಂಡವನ್ನಾಗಿ ಮಾಡಿಕೊಂಡು ನಗರಕ್ಕೆ ಬಂದು ಕಳವು,ದರೋಡೆ  ಕೃತ್ಯವೆಸಗುತ್ತಾರೆ. ಬ್ಯಾಂಕ್‌ಗಳ ಮುಂದೆ ನಿಂತು ಬ್ಯಾಂಕಿಗೆ ಬಂದು ಹೋಗುವ ಗ್ರಾಹಕರನ್ನು ಗಮನಿಸುತ್ತಿದ್ದರು.

ಬ್ಯಾಂಕ್‌ ಮತ್ತು ಎಟಿಎಂ ಕೇಂದ್ರಗಳ  ಬಳಿ ಹಣ ಡ್ರಾ ಮಾಡುವ ಗ್ರಾಹಕರನ್ನು ಹಿಂಬಾಲಿಸಿ ಕಾರುಗಳ ಗಾಜುಗಳನ್ನು ಹೊಡೆದು ಹಣ ಕದ್ದು ಪರಾರಿಯಾಗುತ್ತಿ ದ್ದರು. ಇಲ್ಲವೇ ಕಾರಿನ ಬಳಿ 100 ರೂ. ನೋಟು ಅಥವಾ ಮೈಮೇಲೆ ಗಲೀಜು ಹಾಕಿ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next