ಮಂಗಳೂರು: ಕೇರಳ ಮತ್ತು ಕರ್ನಾಟಕದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ತುಂಬೆ ಗ್ರಾಮದ ತಲಪಾಡಿಯ ಅಬ್ದುಲ್ ಅಜೀಜ್ ಯಾನೆ ಅಜೀಜ್ (45) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಂಗ ವಿಧಿಸಲಾಗಿದೆ.
ಆತನ ವಿರುದ್ಧ ಕೊಣಾಜೆಯಲ್ಲಿ 4, ಉಳ್ಳಾಲದಲ್ಲಿ 3, ಬಂಟ್ವಾಳದಲ್ಲಿ 1, ಹಾಸನ ಅರೇಹಳ್ಳಿ ಮತ್ತು ಕೇರಳ ಕುಟ್ಯಾಡಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಆದೇಶದಂತೆ ದಕ್ಷಿಣ ಪೊಲೀಸ್ ಉಪ ವಿಭಾಗದ ಸಹಾಯಕ ಆಯುಕ್ತೆ ಧನ್ಯಾ ಎಸ್. ನಾಯಕ ಅವರ ಮಾರ್ಗದರ್ಶನದಲ್ಲಿ ಕೊಣಾಜೆ ಇನ್‌ಸ್ಪೆಕ್ಟರ್ ಕೀರ್ತಿಕುಮಾರ್, ಪಿಎಸ್‌ಐ ಅಶೋಕ್, ಸಿಬಂದಿ ಶಿವಕುಮಾರ್ ಹಾಗೂ ಪುರುಷೋತ್ತಮ ಅವರ ತಂಡ ಆರೋಪಿಯನ್ನು ಬಂಧಿಸಿದೆ.