ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಗುತ್ತಿಗೆದಾರನೊಬ್ಬನನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಫ್ರೆಜರ್ಟೌನ್ ನಿವಾಸಿ ಆಫಲ್ ಹುಸೇನ್ (36) ಬಂಧಿತ. ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೋಕೊÕà ಪ್ರಕರಣದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಾಲಕಿಯು ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಆರೋಪಿ ಗುತ್ತಿಗೆದಾರನಾಗಿದ್ದು, ಈತನ ಬಳಿಯೇ ಬಾಲಕಿಯ ಸಹೋದರ ಕೆಲಸ ಮಾಡಿಕೊಂಡಿದ್ದಾನೆ. ಇತ್ತೀಚೆಗೆ ಸಂತ್ರಸ್ತೆ ಮನೆ ಸಮೀಪವೆ ನಿರ್ಮಾಣ ಹಂತದ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆರೋಪಿ, ಸಂತ್ರಸ್ತೆ ಹಾಗೂ ಕುಟುಂಬಸ್ಥರನ್ನು ಪರಿಚಯಿಸಿಕೊಂಡಿದ್ದ. ನಿರ್ಮಾಣ ಹಂತದ ಕಟ್ಟಡಕ್ಕೆ ಬರುವ ನೆಪದಲ್ಲಿ ಬಾಲಕಿಯನ್ನು ಮಾತನಾಡಿಸುತ್ತಿದ್ದ.
ಪರಿಚಯವಿದ್ದುದರಿಂದ ಆರೋಪಿ ಅಫಲ್ ಹುಸೇನ್ ಬಾಲಕಿಯನ್ನು ಹಲವು ಬಾರಿ ತನ್ನ ಕಾರಿನಲ್ಲೇ ಶಾಲೆ ಹಾಗೂ ಮನೆಗೆ ಕಾರಿನಲ್ಲಿ ಡ್ರಾಪ್ ಕೊಡುತ್ತಿದ್ದ. ಈ ವೇಳೆ ಆಕೆಯ ಮೈ-ಕೈ ಮುಟ್ಟಿ ಮಾತನಾಡಿಸುತ್ತಿದ್ದ. ಅಲ್ಲದೇ, ಬಾಲಕಿಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯನ್ನು ಮಾತನಾಡಿಸುತ್ತಿದ್ದ. ಆರೋಪಿ ಕೃತ್ಯದಿಂದ ಬೆದರಿದ ಬಾಲಕಿ ಮನೆಯವರಿಗೆ ಹೇಳಿರಲಿಲ್ಲ.
ಇತ್ತೀಚೆಗೆ ಶಾಲೆಯಿಂದ ಬರುತ್ತಿದ್ದ ಬಾಲಕಿಯನ್ನು ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಆರೋಪಿ ತನ್ನ ಕಾರಿನಲ್ಲಿ ಕೂರಿಸಿಕೊಂಡು ಬಂದಿದ್ದಾನೆ. ಈ ವೇಳೆ ಅಪ್ರಾಪೆ¤ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿಯ ನಿರಂತರ ಕಿರುಕುಳದಿಂದ ಬೇಸತ್ತ ಸಂತ್ರಸ್ತೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ ಈ ಸಂಬಂಧ ಆಕೆಯ ಪೋಷಕರು ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೋಕೊÕà ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.