Advertisement

ನುಸುಳು ಯತ್ನ ವಿಫ‌ಲಗೊಳಿಸಿದ ಸೇನೆ

11:47 PM Aug 06, 2019 | Team Udayavani |

ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪ ಮಂಗಳವಾರ ಶಸ್ತ್ರಸಜ್ಜಿತ ಉಗ್ರರ ಗುಂಪೊಂದು ಭಾರತದೊಳಕ್ಕೆ ನುಸುಳಲು ಯತ್ನಿಸಿದ್ದು, ಭಾರತೀಯ ಸೇನೆಯು ಅದನ್ನು ವಿಫ‌ಲಗೊಳಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರದಿಂದ ಮಾಚಿಲ್‌ ವಲಯದೊಳಕ್ಕೆ ನುಸುಳಲು 6 ಉಗ್ರರು ಮುಂದಾ ದಾಗ, ನಮ್ಮ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆ ನಡೆದ ಚಕಮಕಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next