Advertisement
ಕಲ್ಮಾಡಿ: ಇಂದ್ರಾಣಿ ನದಿಗೆ ಕೊಳಚೆ ನೀರನ್ನು ಬಿಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆಗೆ ಈ ಸಂಬಂಧ ವಿವರಣೆ ಕೇಳಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಂದಿಗೂ ಉತ್ತರಕ್ಕಾಗಿ ಕಾಯುತ್ತಿದೆ. ಇದರೊಂದಿಗೆ ನಗರಸಭೆಯು ತೋರಿರುವ ಮತ್ತೂಂದು ಜಾಣತನ ವೆಂದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸ್ಥಳೀಯ ಎಸ್‌ಟಿಪಿ (ತ್ಯಾಜ್ಯ ನೀರು ಶುದ್ಧೀಕರಣ ಘಟಕ) ಪರೀಕ್ಷೆಗೆ ಬಂದಾಗ ಇಂದ್ರಾಣಿ ನದಿ ಯನ್ನು ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ.
Related Articles
Advertisement
2005ರಿಂದ ಮಂಡಳಿ2005ಕ್ಕಿಂತ ಮೊದಲು ಉಡುಪಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಘಟಕವು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹದಿನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ದೂರುಗಳು ಬಂದಿಲ್ಲ ಎನ್ನುತ್ತವೆ ಮಂಡಳಿ ಮೂಲಗಳು. ಸೂಕ್ತ ಪ್ರಯೋಗಾಲಯವಿಲ್ಲ
ಉಡುಪಿ ಜಿಲ್ಲೆಯ ಮಾಲಿನ್ಯ ನಿಯಂ ತ್ರಣ ಮಂಡಳಿ ಘಟಕದಲ್ಲಿ ಸೂಕ್ಷ್ಮಾಣು ಜೀವಿ ಗಳನ್ನು ಪರೀಕ್ಷೆ ಮಾಡುವ ಸೌಲಭ್ಯ ವಿಲ್ಲ. ಇದೂ ಕೊಳಚೆ ನೀರು ಸೇರು ತ್ತಿರುವ ಪ್ರದೇಶಗಳ ನೈಜ ಪರೀಕ್ಷೆಗೆ ಬಹಳ ದೊಡ್ಡ ಹಿನ್ನೆಡೆಯಾಗಿದೆ. ಪ್ರಸ್ತುತ ಈ ಸೌಲಭ್ಯ ಇರುವುದು ಮಂಗಳೂರಿನಲ್ಲಿ ಮಾತ್ರ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಈ ಸೌಲಭ್ಯ ವಿದೆ. ಆದರೆ ಅಲ್ಲಿ ಪರೀಕ್ಷಿಸುವ ಗೋಜಿಗೆ ಮಂಡಳಿ ಇದುವರೆಗೆ ಹೋಗಿಲ್ಲ.
ಈ ಕ್ಷೇತ್ರದ ಪರಿಣಿತರು ಹೇಳುವಂತೆ, ಯಾವುದೇ ಪ್ರದೇಶದ ನೀರಿನ ಮಾದರಿ ಗಳನ್ನು ಸಂಗ್ರಹಿಸಿದ 4 ಗಂಟೆಯೊಳಗೆ ಅದನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸ ಬೇಕು. ಅದಾದ ಮೇಲೆ ಪರೀಕ್ಷೆ ಗೊಳ ಪಡಿಸಿದರೆ ನಿಖರ ವರದಿ ಸಿಗು ವುದು ಕಷ್ಟ. ಈಗ ಇಲ್ಲಿ ನೀರು ಸಂಗ್ರಹಿ ಸಿದರೂ ಮಂಗಳೂರಿಗೆ ಕಳಿಸಿ, ಪರೀಕ್ಷೆ ಕೈಗೊಳ್ಳುವುದರೊಳಗೆ ನಿಗದಿತ ಅವಧಿ ಮುಗಿಯುತ್ತದೆ. ಅದರಿಂದ ಪ್ರಯೋ ಜನ ಕಡಿಮೆ. ಅದೇ ಕಾರಣದಿಂದ ಇಂದ್ರಾಣಿ ನದಿ ಯಲ್ಲಿನ ಕೊಳಚೆ ನೀರಿನ ಕುರಿತು ಸೂಕ್ಷ್ಮಾಣು ಜೀವಿ ಗಳ ಕುರಿತು ಅಧ್ಯಯನವನ್ನೇ ನಡೆಸಿಲ್ಲ ಎನ್ನಲಾಗುತ್ತಿದೆ. ಇಂದ್ರಾಣಿ ನದಿಯೇ ಇಲ್ಲ, ಉದ್ಯಾವರ ಹೊಳೆ ?
ನಗರಸಭೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿರುವ ಮಾಹಿತಿಯಲ್ಲಿ ಇಂದ್ರಾಣಿ ನದಿಯನ್ನು ಉಲ್ಲೇಖೀ ಸಿಯೇ ಇಲ್ಲ. ಬಹಳ ವಿಚಿತ್ರವೆಂದರೆ, ನಿಟ್ಟೂರು ಎಸ್‌ಟಿಪಿ ಘಟಕ ದಿಂದ ತ್ಯಾಜ್ಯ ನೀರು ಶುದ್ಧೀಕರಿಸಿ ಮಳೆ ನೀರಿನ ತೋಡಿನ ಮೂಲಕ ಉದ್ಯಾವರ ಹೊಳೆಗೆ ಬಿಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ನಗರದೊಳಗೆ ಯಾವುದೇ ನದಿಗೆ ನಾವು ತ್ಯಾಜ್ಯ ಬಿಡುತ್ತಿಲ್ಲ ಎನ್ನುವ ಮೂಲಕ ಪಾರಿಸರಿಕ ವ್ಯಾಜ್ಯಗಳಿಂದ ದೂರ ಉಳಿಯಲು ಜಾಣ್ಮೆ ವಹಿಸಿದೆ. ವಾಸ್ತವವಾಗಿ, ನಿಯಮಗಳ ಪ್ರಕಾರ ಮಳೆ ನೀರಿನ ತೋಡಿಗೂ ತ್ಯಾಜ್ಯ ಬಿಡುವಂತಿಲ್ಲ. ಐದು ವರ್ಷಗಳ ಹಿಂದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದಕ್ಷಿಣ ವಲಯದ ಅಧಿಕಾರಿಗಳು ನಿಟ್ಟೂರು ಎಸ್‌ಟಿಪಿ ಘಟಕಕ್ಕೆ ಭೇಟಿ ನೀಡಿದ್ದರು. ಎಲ್ಲವನ್ನೂ ಪರೀಕ್ಷಿಸಿ ವರದಿ ನೀಡಿದೆ. ಅದರಲ್ಲಿ ಉಲ್ಲೇಖೀಸಿರುವ ಅಂಶಗಳ ಪ್ರಕಾರ, ನಿಟ್ಟೂರು ಘಟಕದಲ್ಲಿ ಶುದ್ಧೀಕರಿಸುವ ತ್ಯಾಜ್ಯ ನೀರನ್ನು ಕಲ್ಸಂಕ ತೋಡಿನ ಮೂಲಕ ಉದ್ಯಾವರ ಹೊಳೆಗೆ ಬಿಡಲಾಗುವುದು. ಆ ಬಳಿಕ ಅದು ಸಮುದ್ರವನ್ನು ಸೇರುತ್ತದೆ ಎಂದು ಹೇಳಲಾಗಿದೆ. ಎಲ್ಲಿಯೂ ಇಂದ್ರಾಣಿ ನದಿಯ ಹೆಸರನ್ನೇ ಪ್ರಸ್ತಾಪಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಂತರ್ಜಲಕ್ಕೂ ಕೊಳಚೆ ನೀರು ಸೇರ್ಪಡೆ?
ಕೊಡವೂರು ಸೇರಿದಂತೆ ಇಂದ್ರಾಣಿ ನದಿ ಪ್ರದೇಶ ದಲ್ಲಿ ಅಂತರ್ಜಲಕ್ಕೂ ಕೊಳಚೆ ನೀರು ಮಿಶ್ರಣ ವಾಗಿರುವ ಆತಂಕವೂ ಎದುರಾಗಿದೆ. ಈ ಪ್ರದೇಶದಲ್ಲಿ ಬಹುತೇಕ ಮಂದಿ ಬಾವಿಯ ನೀರನ್ನು ಬಳಸುತ್ತಿಲ್ಲ. ಕೃಷಿ, ತೋಟಗಾರಿಕೆ ಮತ್ತು ಇತರ ಉದ್ದೇಶಗಳಿಗೂ ಬಳಸದ ಕಾರಣ ಅಂತರ್ಜಲ ಮಟ್ಟ ಈ ಭಾಗದಲ್ಲಿ ನಾಲ್ಕು ವರ್ಷ ಗಳಿಗಿಂತ ಹೆಚ್ಚಿದೆ. ಉದಾಹರಣೆಗೆ 2017ರ ಜನವರಿ ಯಲ್ಲಿ ಸುಮಾರು 12 ಮೀಟರ್ ಆಳಕ್ಕೆ ಅಂತರ್ಜಲ ಮಟ್ಟ (ಅದಕ್ಕಿಂತ ಹಿಂದಿನ ಅಂಕಿಅಂಶ ಲಭ್ಯ ವಾಗಿಲ್ಲ) ಕುಸಿತ ಕಂಡಿತ್ತು¤. ಈಗ ಅದು 2.4 ಮೀಟರ್‌ಗೆ ಹೆಚ್ಚಿದೆ. ಪ್ರಸ್ತುತ ನೀರು ಹಾಳಾ ಗಿದೆ. ಇದರರ್ಥ ಅಂತರ್ಜಲಕ್ಕೂ ಕೊಳಚೆ ಸೇರಿರುವ ಸಾಧ್ಯತೆ ಹೆಚ್ಚಿದೆ. ಆ ನೀರು ಬಳಕೆಗೆ ಆರಂಭಿ ಸಿದರೆ ಇನ್ನಷ್ಟು ಮಾಹಿತಿ ಸಿಗಬಹುದು ಎಂಬುದು ಅಂತರ್ಜಲ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಮತ್ತೆ ನೀರು ಬಿಟ್ಟರೇ?
ನಿಟ್ಟೂರು ಎಸ್‌ಟಿಪಿಯಿಂದ ಮತ್ತೆ ಅಶುದ್ಧವಾದ ನೀರು ಬಿಟ್ಟಿದ್ದಾರೆಂಬ ಆರೋಪ ಕಲ್ಮಾಡಿ ಕಟ್ಟ ಹಾಗೂ ಮತ್ತಿತರ ಪ್ರದೇಶದಲ್ಲಿ ಕೇಳಿಬರುತ್ತಿದೆ. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಪ್ಪು ಕಪ್ಪಾದ ನೀರು ಹರಿಯುತ್ತಿತ್ತು. ಅದು ನಿಟ್ಟೂರು ಬಳಿ ನೀರು ಬಿಟ್ಟಿರುವುದೇ ಕಾರಣ ಎಂದು ಸ್ಥಳೀಯರು ಉದಯವಾಣಿ ಸುದಿನಕ್ಕೆ ವಿವರಿಸಿದರು. ಕಲ್ಮಾಡಿ ಕಟ್ಟದ ಬಳಿಯ ಜನರೂ ಈ ಸಂಬಂಧ ನೀರು ನಿನ್ನೆಗಿಂತ ಇಂದು ಹೆಚ್ಚು ಕಪ್ಪಾಗಿತ್ತು ಎಂದು ಹೇಳಿದರು. ಮಾರಿಗುಡಿ ಬಾವಿಯೂ ಕಲುಷಿತ ಈ ಹುಣ್ಣಿಮೆ ಪೂಜೆಗೆ ನೀರಿಲ್ಲ!
ಮಾರಿಗುಡಿ: ಕಲ್ಮಾಡಿ ಕಟ್ಟದ ಬಳಿಯ ಮಾರಿಗುಡಿಯ ಬಾವಿಯೂ ಹಾಳಾಗಿರುವುದು ಮಂಗಳವಾರ ಪತ್ತೆಯಾಗಿದೆ. ಹಾಗಾಗಿ ಮುಂದಿನ ಹುಣ್ಣಿಮೆಯಂದು ನಡೆಯುವ ವಿಶೇಷ ಪೂಜೆಯ ಸಂದರ್ಭದಲ್ಲಿ ದೇವಿಯ ಅಭಿಷೇಕಕ್ಕೆ ನೀರು ಎಲ್ಲಿಂದ ತರುವುದೆಂಬ ಸಂಕಷ್ಟ ಎದುರಾಗಿದೆ. ಇದೇ ಬಾವಿಯ ನೀರನ್ನು ಈ ಹಿಂದಿನಿಂದಲೂ ದೇವಿಯ ಅಭಿಷೇಕಕ್ಕೆ ಬಳಸ ಲಾಗುತ್ತಿತ್ತು. ಕಳೆದ ಹುಣ್ಣಿಮೆಯಲ್ಲೂ ಸಮಸ್ಯೆ ಕಂಡುಬಂದಿರಲಿಲ್ಲ. ಅಲ್ಲದೇ 10 ದಿನಗಳ ಹಿಂದೆ ನಡೆದ ವೈಶಾಖ ಮಾರಿ ಉತ್ಸವದಲ್ಲೂ ಇಲ್ಲಿನ ನೀರು ಬಳಸಲಾಗಿತ್ತು. ಆದರೆ ಈಗ ಸಂಪೂರ್ಣ ಹಾಳಾಗಿದೆ. ಸುದಿನ ಅಧ್ಯಯನ ತಂಡದ ಸದಸ್ಯರೊಂದಿಗೆ ಮಾತನಾಡಿದ ಮಾರಿಗುಡಿಯ ಕಾರ್ಯಕರ್ತರು, ಬಳಸಲಾಗುತ್ತಿದ್ದ ನೀರು ಇದ್ದಕ್ಕಿದ್ದಂತೆ ಕಪ್ಪಾಗಿದೆ. ಜತೆಗೆ ಎಣ್ಣೆ ಅಂಶಗಳೂ ಕಂಡುಬರುತ್ತಿವೆ. ನೀರು ದುರ್ವಾಸನೆಯಿಂದ ಕೂಡಿದೆ ಎಂದರು. ಪರೀಕ್ಷೆಗೆಂದು ತಂಡವು ಸ್ವಲ್ಪ ನೀರು ತೆಗೆಸಿ ದಾಗ ಅದರ ದುರ್ವಾಸನೆ ತಡೆಯಲು ಸಾಧ್ಯವಾಗಲಿಲ್ಲ. ಈ ಗುಡಿಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯಾಪ್ತಿಗೆ ಒಳಪಡುತ್ತದೆ. ಸುದಿನ ತಂಡ