ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ 6 ವರ್ಷದ ಒಳಗಿನ ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯ ಒದಗಿಸುವ ಸಲುವಾಗಿ ನಿರ್ಮಾಣಗೊಳ್ಳುತಿರುವ ತಾಲೂಕಿನ ಸುಮಾರು 25 ಅಂಗನವಾಡಿ ಕೇಂದ್ರಗಳು ಅಪೂರ್ಣವಾಗಿ ನಿಂತಿದೆ.
Advertisement
ತಾಲೂಕಿನಾದ್ಯಂತ ಸುಮಾರು 6 ವರ್ಷಗಳ ಹಿಂದೆಯೇ ಅಂಗನವಾಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇದುವರೆಗೆ ಅಂಗನವಾಡಿ ಕೇಂದ್ರಗಳು ಕೆಲವೊಂದು ಲೆಂಟಲ್‌ಗೆ ಬಂದರೆ ಕೆಲವು ಸ್ಲ್ಯಾಬ್ ಮತ್ತು ಸುಣ್ಣ, ಬಣ್ಣ, ಪರ್ಸಿ ಹಾಕಿಸಬೇಕಾಗಿದೆ. ಆದರೆ ಆರು ವರ್ಷ ಕಳೆದರೂ ಸಹ ಇದುವರೆಗೂ ಅದು ಪೂರ್ಣಗೊಳ್ಳದೆ ಹಾಳು ಬಿದ್ದಿವೆ.
Related Articles
Advertisement
ಅಂಗನವಾಡಿ ಕಟ್ಟಡ ಅರ್ಧಕ್ಕೆ ನಿಂತ ಪರಿಣಾಮ ಮಕ್ಕಳಿಗೆ ಬೇರೆ ಕಡೆ ಕೂಡಿಸಿ ವಿದ್ಯಾಭ್ಯಾಸ ಮಾಡುಸುತ್ತಿದ್ದಾರೆ. ರಾತ್ರಿಯಾದರೆ ಅಲ್ಲಿ ಸಿಗರೇಟ್ ಸೇದಲು, ಸಾರಾಯಿ ಕುಡಿಯಲು ಮತ್ತು ಇನ್ನಿತರ ಚಟುವಟಿಕೆ ನಡೆಸುವವರಿಗೆ ಆಶ್ರಯ ತಾಣವಾಗಿದೆ ಎನ್ನುತ್ತಿದ್ದಾರೆ ಅಲ್ಲಿನ ನಿವಾಸಿಗಳು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 2-3 ವರ್ಷಗಳಿಂದ ಅನುದಾನ ಕೊರತೆಯಿಂದ ಅಂಗನವಾಡಿ ಕಟ್ಟಡದ ಕಾಮಗಾರಿಗಳು ಸ್ವಲ್ಪ ವಿಳಂಬವಾಗಿದೆ. ಮತ್ತೆ ಜಿಲ್ಲಾ ಪಂಚಾಯತ್ ಸಿಎಸ್ ಅವರಿಂದ ಅನೂಮೋದನೆ ಪಡೆದು ಅತಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗುತ್ತದೆ. –ರಾಜಕುಮಾರ ತೋರವಿ, ಸಹಾಯಕ ಕಾರ್ಯನಿವಾಕ ಎಂಜಿನಿಯರ್ ಪಂ.ರಾ.ಇಂ.ಉಪ ವಿಭಾಗ ಇಂಡಿ
ಯಲಗೊಂಡ ಬೇವನೂರ