Advertisement
ಜಗತ್ತಿನಲ್ಲೇ ಅತೀ ಎತ್ತರದಲ್ಲಿ ಹಾರಾಡುವ ಪಕ್ಷಿಗಳಲ್ಲಿ ಆ್ಯಂಡಿಯಾನ್ ಕೊಂಡೊರ್ ಕೂಡಾ ಒಂದು. ಸುಮಾರು 10 ಅಡಿ ಎತ್ತರ ಬೆಳೆಯುವ ಇವುಗಳ ರೆಕ್ಕೆ 33 ಪೌಂಡ್‌ವರೆಗೆ ತೂಕ ಹೊಂದಿರುತ್ತವೆ. ಇಷ್ಟೆಲ್ಲ ವಿಶೇಷತೆಗಳ ನಡುವೆ ಇತ್ತೀಚೆಗೆ ಇನ್ನೊಂದು ಕುತೂಹಲಕಾರಿ ಸಂಗತಿಯೊಂದು ಬಹಿರಂಗಗೊಂಡಿದೆ. ಆ್ಯಂಡಿಯಾನ್ ಕೊಂಡೊರ್ ರೆಕ್ಕೆ ಬಡಿಯದೆ ಗಂಟೆಗಟ್ಟಲೆ ಹಾರಾಡುವ ಸಾಮರ್ಥ್ಯ ಅಧ್ಯಯನದಿಂದ ತಿಳಿದು ಬಂದಿದ್ದು, ವಿಜ್ಞಾನಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಅದರಲ್ಲೂ ಒಂದು ಹಕ್ಕಿಯಂತೂ ಸುಮಾರು 5 ಗಂಟೆಯ ಹಾರಾಟದಲ್ಲಿ ರೆಕ್ಕೆ ಬಡಿದದ್ದು ಒಮ್ಮೆ ಮಾತ್ರ ಎನ್ನುವುದು ಅದರ ಶಕ್ತಿಗೆ ಸ್ಪಷ್ಟ ಉದಾಹರಣೆ.
Related Articles
ಆ್ಯಂಡಿಯಾನ್ ಕೊಂಡೊರ್ ಬಗ್ಗೆ ಅಧ್ಯಯನ ನಿರತ ತಜ್ಞರು ಅವುಗಳ ಪ್ರತಿ ಚಲನವಲನಗಳನ್ನು ರೆಕಾರ್ಡ್ ಮಾಡಲು ನಿರ್ಧರಿಸಿದರು. ಅದರಂತೆ 8 ಹಕ್ಕಿಗಳ ರೆಕ್ಕೆಗಳ ಕೆಳಗೆ ರೆಕಾರ್ಡ್ ಯಂತ್ರಗಳನ್ನು ಅಳವಡಿಸಿದರು. ಇದರಿಂದ ರೆಕ್ಕೆ ಬಡಿತ ಅಧ್ಯಯನ ನಿರತರಿಗೆ ಅಚ್ಚರಿಯ ವಿಷಯಗಳನ್ನು ಗೊತ್ತಾಗತೊಡಗಿದವು. ಹಾರಾಡುವ ಸಮಯದ ಶೇಕಡಾ ಒಂದರಷ್ಟು ಮಾತ್ರ ಅವು ರೆಕ್ಕೆ ಬಡಿಯಲು ಉಪಯೋಗಿಸುತ್ತವೆ. ಅದರಲ್ಲೂ 5 ಗಂಟೆಗಳ ಕಾಲ ಸುಮಾರು 160 ಕಿ.ಮೀ. ಹಾರಾಡಿದ ಹಕ್ಕಿಯೊಂದು ಒಮ್ಮೆ ಮಾತ್ರ ರೆಕ್ಕೆ ಬಡಿದಿತ್ತು. “ಆ್ಯಂಡಿಯಾನ್ ಕೊಂಡೊರ್‌ಗಳು ಬಹಳ ಬಲಿಷ್ಟ ಎಂದು ಗೊತ್ತಿತ್ತು. ಆದರೆ ಇಷ್ಟೊಂದು ಶಕ್ತಿಶಾಲಿ ಎನ್ನುವುದು ಗೊತ್ತಿರಲಿಲ್ಲ’ ಎಂದು ಆಶ್ಚರ್ಯ ವ್ಯಕ್ತ ಪಡಿಸುತ್ತಾರೆ ಇಂಗ್ಲೆಂಡ್ ವೇಲ್ಸ್‌ನ ಸ್ವಾನ್‌ಸಿ ವಿಶ್ವವಿದ್ಯಾನಿಲಯದ ಸಂಶೋಧಕರಾದ ಎಮಿಲಿ ಷೆಪಾರ್ಡ್.
Advertisement