Advertisement
ಕಲಾತ್ಮಕತೆ ಮತ್ತು ಐತಿಹಾಸಿಕ ಕಾರಣಗಳಿಂದ ಮಹತ್ವ ಪಡೆದಿರುವ ಶಿಲಾಬಾಲಿಕೆಯರು, ಪ್ರಾಚ್ಯವಸ್ತು, ಪ್ರವಾಸೋದ್ಯಮ ಇಲಾಖೆ ಜೊತೆಗೆ ಈ ಭಾಗದ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಶಿಥಿಲಾವಸ್ಥೆ ತಲುಪುತ್ತಿದೆ. ದೇವಾಲಯ ಗೋಡೆಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಗಿಡಗಳು ಬೆಳೆದು, ಶಿಲ್ಪಗಳು ಶಿಥಿಲಗೊಳ್ಳುತ್ತಿವೆ. ಅದೆಷ್ಟೋ ಮೂರ್ತಿಗಳು ಸೂಕ್ತ ವ್ಯವಸ್ಥೆ ಕೊರತೆಯಿಂದ ಪ್ರಾಂಗಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಂಬಂಧಪಟ್ಟ ಇಲಾಖೆ ವಿಶೇಷ ಮುತುವರ್ಜಿ ವಹಿಸಿ, ಈ ಐತಿಹಾಸಿಕ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕಿದೆ.
Related Articles
Advertisement
ಐತಿಹಾಸಿಕ ಮಹತ್ವ ಪರಿಚಯಿಸುವ ಈ ದೇಗುಲ ಈ ಸ್ಥಿತಿಗೆ ತಲುಪಲು ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆ ತಾಳಿರುವ ನಿರ್ಲಕ್ಷ್ಯವೇ ಕಾರಣ. ಈ ಮಧ್ಯ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ಇದೇ ಜಿಲ್ಲೆಯವರೇ ಆದ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ರಹಿಂಖಾನ್ ಸೇರಿ ಮೂವರು ಸಚಿವರಿದ್ದರೂ ಐತಿಹಾಸಿಕ ದೇವಸ್ಥಾನ ಅಭಿವೃದ್ಧಿ ಕಾಣದೇ ಇರುವುದು ನೋವಿನ ಸಂಗತಿ. ಈ ಎಲ್ಲದರ ಜೊತೆಗೆ ಜಿಲ್ಲಾ ಆಡಳಿತ ಇಂಥ ಕೇಂದ್ರಗಳ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಐತಿಹಾಸಿಕ ಸ್ಮಾರಕ ಪ್ರಿಯರ ಒತ್ತಾಸೆ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ದೇವಸ್ಥಾನ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.
ನಮ್ಮೂರ ಕಲ್ಮೇಶ್ವರ ಶಿಲ್ಪಕಲಾ ದೇಗುಲ ಬೇರಾವುದಾದರೂ ಜಿಲ್ಲೆಯಲ್ಲಿದ್ದಿದ್ದರೆ ಎಷ್ಟೆಲ್ಲ ಅಭಿವೃದ್ಧಿ ಆಗುತ್ತಿತ್ತು. ಬೀದರ ಜಿಲ್ಲೆಯ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳಿಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಹಿಂದೆ ಹೋದದ್ದು ಹೋಗಲಿ ಮುಂದಾದರೂ ನಮ್ಮ ಜಿಲ್ಲೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇಂಥ ಸ್ಮಾರಕಗಳ ಅಭಿವೃದ್ಧಿಗೊಳಿಸಲು ಮುಂದಾಗಬೇಕು.ಖಾಸೀಂ-ಅಲಿ, ಜಲಸಂಗವಿ ಗ್ರಾಮಸ್ಥ ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆಗೆ ಈ ದೇವಸ್ಥಾನ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಆಗೊಮ್ಮೆ ಈಗೊಮ್ಮೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಬೆರಳೆಣಿಕೆಯಷ್ಟು ಸಂಶೋಧಕರು ಬರುತ್ತಾರೆ ಎಂಬ ಕಾರಣಕ್ಕಾಗಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆಲವರು ಹಾಳು ಮಾಡಿದ್ದಾರೆ. ದೇವಸ್ಥಾನ ಪ್ರಾಂಗಣ ಸ್ವತ್ಛತೆ ಇತ್ಯಾದಿ ಸಣ್ಣಪುಟ್ಟ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಬಗೆ ಹರಿಸುತ್ತೇವೆ. ಉಳಿದದ್ದನ್ನು ಸಂಬಂಧಪಟ್ಟ ಇಲಾಖೆಯವರೆ ಮಾಡಬೇಕು.
ಸರಸ್ವತಿ ಘಂಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಜಲಸಂಗವಿ ಶಶಿಕಾಂತ ಕೆ. ಭಗೋಜಿ