Advertisement

ದ. ಆಫ್ರಿಕಾ, ಯುಎಇ ಟಿ20 ಲೀಗ್‌: ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಹೆಸರು ಪ್ರಕಟ

11:36 PM Aug 10, 2022 | Team Udayavani |

ಮುಂಬಯಿ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್‌ ಇನ್ನು ದಕ್ಷಿಣ ಆಫ್ರಿಕಾ ಟಿ20 ಲೀಗ್‌ ಮತ್ತು ಯುಎಇ ಇಂಟರ್‌ನ್ಯಾಶನಲ್‌ ಲೀಗ್‌ ಟಿ20 ಕೂಟಗಳಲ್ಲಿ ಆಡಲಿದೆ.

Advertisement

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮಾಲಕತ್ವದ ಈ ಫ್ರಾಂಚೈಸಿ, ಎರಡೂ ಸರಣಿಗಳಿಗೆ ತನ್ನ ಹೆಸರನ್ನು ಪ್ರಕಟಿಸಿದೆ. ಈ ಹೆಸರುಗಳೆಂದರೆ “ಎಂಐ ಕೇಪ್‌ಟೌನ್‌’ ಮತ್ತು “ಎಂಐ ಎಮಿರೇಟ್ಸ್‌’.

“ಮುಂಬೈ ಇಂಡಿಯನ್ಸ್‌’ನ ಮೊದಲೆರಡು ಅಕ್ಷರಗಳಾದ “ಎಂ ಐ’ಯನ್ನು ಇದು ಪ್ರತಿನಿಧಿಸಲಿದೆ. ಆದರೆ ಉಚ್ಛಾರ “ಮೈ ಇಂಡಿಯನ್ಸ್‌’ ಮತ್ತು “ಮೈ ಎಮಿರೇಟ್ಸ್‌’ ಆಗಿರಲಿದೆ. ಅಲ್ಲಿನ ಕ್ರಿಕೆಟ್‌ ಅಭಿಮಾನಿಗಳಿಗೆ ಈ ಹೆಸರು ಅರ್ಪಣೆ ಎಂಬುದಾಗಿ ಫ್ರಾಂಚೈಸಿ ತಿಳಿಸಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಲೀಗ್‌ನಲ್ಲಿ ಆಡಲು ಈಗಾಗಲೇ 30 ಸ್ಟಾರ್‌ ಆಟಗಾರರು ಸಹಿ ಹಾಕಿದ್ದಾರೆ. ಆದರೆ ಇವರ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಪ್ರತಿಯೊಂದು ಫ್ರಾಂಚೈಸಿ 17 ಆಟಗಾರರನ್ನು ಒಳಗೊಂಡಿರುತ್ತದೆ. ಈ ಲೀಗ್‌ ಮುಂದಿನ ಜನವರಿಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next