Advertisement

ಇಂದು ಬಿಸಿಸಿಐಗೆ ಆಡಳಿತಾಧಿಕಾರಿಗಳ ನೇಮಕ?

03:45 AM Jan 30, 2017 | |

ಹೊಸದಿಲ್ಲಿ: ಬಿಸಿಸಿಐಗೆ ಆಡಳಿತಾಧಿಕಾರಿಗಳ ನೇಮಕ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ಕೈಗೆತ್ತಿಕೊಳ್ಳಲಿದೆ. ಬಹುತೇಕ ಅಂದೇ ಆಡಳಿತಾಧಿಕಾರಿಗಳ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಜ. 24ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತ್ತು. ಈ ವೇಳೆ ಅಮಿಕಸ್‌ ಕ್ಯೂರಿಗಳಾದ ಗೋಪಾಲ ಸುಬ್ರಹ್ಮಣ್ಯಂ ಮತ್ತು ಅನಿಲ್‌ ದಿವಾನ್‌ ಸಲ್ಲಿಸಿರುವ ಪಟ್ಟಿ ಪರಿಶೀಲನೆ ನಡೆಯಿತು. ಆದರೆ “ಪಟ್ಟಿ ಉದ್ದವಾಯಿತು. ಇದನ್ನು ಮೊಟಕುಗೊಳಿಸಿ’ ಎಂದು ನ್ಯಾಯಾಲಯ ಅಮಿಕಸ್‌ ಕ್ಯೂರಿಗೆ ಸೂಚಿಸಿತ್ತು. ಮಾತ್ರವಲ್ಲ ಪಟ್ಟಿಯಲ್ಲಿ ಇರುವವರಲ್ಲಿ 70  ವರ್ಷ ಮೀರಿಬಾರದು, ಲೋಧಾ ಸಮಿತಿ ಶಿಫಾರಸಿನ ಪ್ರಕಾರವೇ ಅಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ನ್ಯಾಯಾಲಯ ಖಡಕ್‌ ಆಗಿ ಹೇಳಿತ್ತು.

ಈಗಾಗಲೇ ಅಮಿಕಸ್‌ ಕ್ಯೂರಿ ಪಟ್ಟಿ ಸಲ್ಲಿಕೆಯಾಗಿದೆ. ಬಿಸಿಸಿಐ ಮತ್ತು ಕೇಂದ್ರಕ್ಕೆ ಹೊಸ ಆಡಳಿತಾಧಿಕಾರಿಗಳ ಹೆಸರನ್ನು ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್‌ ಜ. 24ರಂದು ಸೂಚಿಸಿತ್ತು. ಜ. 27ರ ಗಡುವನ್ನು ನೀಡಿತ್ತು. ಮೂಲಗಳ ಪ್ರಕಾರ ಬಿಸಿಸಿಐ, ಕೇಂದ್ರ ಸರಕಾರ ಬಹುತೇಕ ಆಡಳಿತಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅಂತಿಮವಾಗಿ ಸುಪ್ರೀಂ ಕೋರ್ಟ್‌ ಎಲ್ಲವನ್ನು ಪರಿಶೀಲನೆ ನಡೆಸಿದ ಬಳಿಕ ಹೊಸ ಆಡಳಿತಾಧಿಕಾರಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next