Advertisement

17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

12:33 AM Jun 03, 2023 | Team Udayavani |

ಮಂಗಳೂರು: ನಗರದ ಉತ್ತರ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕರಣವೊಂದರ ಆರೋಪಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನನ್ನು ನಗರ ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಟ್ವಾಳ ತಾಲೂಕು ಮೇರಮಜಲು ಪಕ್ಕಲಪಾದೆ ನಿವಾಸಿ ಜೇಸನ್‌ ಪೀಟರ್‌ ಡಿ’ಸೋಜಾ (42) ಬಂಧಿತ ಆರೋಪಿ.
ಈತ 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪೋಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯಎಲ್‌ಪಿಸಿ ಪ್ರಕರಣವೆಂದು ಪರಿಗಣಿಸಿತ್ತು. ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಆರ್‌. ಜೈನ್‌ ಅವರು ಆರೋಪಿಯನ್ನು ಪತ್ತೆ ಹಚ್ಚಿದ ತಂಡವನ್ನು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕೇಂದ್ರ ವಿಭಾಗ ಎಸಿಪಿ ಮಹೇಶ್‌ ಕುಮಾರ್‌ ನಿರ್ದೇಶನದಂತೆ ಉತ್ತರ ಪೊಲೀಸ್‌ ಠಾಣೆಯ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ಮಾರ್ಗದರ್ಶನದಲ್ಲಿ ಠಾಣಾ ಅ ಧಿಕಾರಿ ಮತ್ತು ಸಿಬಂದಿ ಪಿಎಸ್‌ಐ ಪುನೀತ್‌ ಗಾಂವ್ಕರ್‌, ತಿಪ್ಪರೆಡೆÂಪ್ಪ, ಗುರು ಬಿ.ಟಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next