Advertisement

ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳು ಕೋರ್ಟ್‌ಗೆ ಹಾಜರು 

07:30 AM Aug 01, 2017 | |

ಬಳ್ಳಾರಿ: ಗುಜರಾತ್‌ನ ಅಹ್ಮದಾಬಾದ್‌ ಹಾಗೂ ಸೂರತ್‌ನಲ್ಲಿ 2008 ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಮೂವರು ಆರೋಪಿಗಳನ್ನು ಕೊಪ್ಪಳದಲ್ಲಿ ನಡೆದಿದ್ದ ಬೈಕ್‌ ಕಳವು ಪ್ರಕರಣವೊಂದರ ವಿಚಾರಣೆಗಾಗಿ ಸೋಮವಾರ ನಗರದ ಪ್ರಿನ್ಸಿಪಾಲ್‌ ಸೀನಿಯರ್‌ ಸಿವಿಲ್‌ ಹಾಗೂ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advertisement

ಹೊಸಪೇಟೆ ಮೂಲದ ಎಚ್‌.ಎ. ಅಸಾದುಲ್ಲಾ, ಹುಬ್ಬಳ್ಳಿ ಮೂಲದ ರಾಜುದ್ದೀನ್‌ ನಾಸೀರ್‌ ಹಾಗೂ ಧಾರವಾಡದ ಶಕೀಲ್‌ ಅಹ್ಮದ್‌ ಅವರನ್ನು ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಅಹ್ಮದಾಬಾದ್‌ನ ಶಾಹಿಬಾಗ್‌ ಪೊಲೀಸರು ಸೋಮವಾರ ಸಿಜೆಎಂ ನ್ಯಾಯಾ ಧೀಶರಾದ ಕಾತ್ಯಾಯನಿ ಅವರ ಮುಂದೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 7, 8 ಹಾಗೂ 9ರಂದು ನಿಗದಿಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಆರೋಪಿಗಳನ್ನು ನಂತರ ಗುಜರಾತ್‌ ಹಾಗೂ ಗಾಂಧಿನಗರ ಪೊಲೀಸರು ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಬಿಗಿ ಭದ್ರತೆಯಲ್ಲಿ ರವಾನಿಸಿದರು.

ಈ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಪ್ರಭಾರಿ ಸರ್ಕಾರಿ ಹಿರಿಯ ಅಭಿಯೋಜಕ ಮಂಜುನಾಥ ಬೀರಗಿ, 2007ರಲ್ಲಿ ಅಸಾದುಲ್ಲಾ ವಿರುದಟಛಿ ಬೈಕ್‌ ಕಳ್ಳತನ ಪ್ರಕರಣ ಕೊಪ್ಪಳ ನಗರ ಠಾಣೆಯಲ್ಲಿ ದಾಖಲಾಗಿತ್ತು.

2008ರಲ್ಲಿ ದಾವಣಗೆರೆಯ ಹೊನ್ನಾಳಿ ಪೊಲೀಸರು ಅಸಾದುಲ್ಲಾ ಹಾಗೂ ರಾಜುದ್ದೀನ್‌ ನಾಸೀರ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ಈ ಬೈಕ್‌ನ್ನು ಕೊಪ್ಪಳ ನಗರದಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡು ಕದ್ದ ಬೈಕ್‌ ಅನ್ನು ಶಕೀಲ್‌ ಅಹಮದ್‌ ಖರೀದಿಸಿದ್ದು ಅವನ ವಶದಲ್ಲಿತ್ತು ಎಂದು ತಪ್ಪೊಪ್ಪಿಕೊಂಡಿದ್ದರು.ಪ್ರಕರಣವನ್ನು ಹೊನ್ನಾಳಿ ಪೊಲೀಸರು ಕೊಪ್ಪಳ ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಕೊಪ್ಪಳ ಪೊಲೀಸರು 2013ರಲ್ಲಿ ಆರೋಪಿಗಳ ವಿರುದಟಛಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡುವೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೂವರು 2008ರ ಗುಜರಾತ್‌ ಸರಣಿ ಸ್ಫೋಟಕದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇರೆಗೆ ಈ ಮೂವರನ್ನು ಗುಜರಾತ್‌ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು ಎಂದರು.

ಆರೋಪಿಗಳ ವಿರುದ್ಧ ಬಹು ಆರೋಪ
ಗುಜರಾತ್‌ ರಾಜ್ಯದ ಅಹ್ಮದಾಬಾದ್‌ ಹಾಗೂ ಸೂರತ್‌ ನಗರಗಳಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟಕ
ಪ್ರಕರಣದಲ್ಲಿ ಭಾಗಿಯಾಗಿ ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಎಚ್‌.ಎ.ಅಸಾದುಲ್ಲಾ, ಹುಬ್ಬಳ್ಳಿ
ಮೂಲದ ರಾಜುದ್ದೀನ್‌ ನಾಸೀರ್‌ ಹಾಗೂ ಧಾರವಾಡದ ಶಕೀಲ್‌ ಅಹ್ಮದ್‌ ಸೇರಿ 35 ಜನ ಆರೋಪಿಗಳ ವಿರುದ್ಧ ಅಹ್ಮದಾಬಾದಿನ ಶಾಹಿಬಾಗ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಷೇಧ ಕಾಯ್ದೆಗಳ ವಿವಿಧ ಕಲಂ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಇಂತಹ ಹೈಪ್ರೊಫೈಲ್‌ ಕೇಸ್‌ನ ಆರೋಪಿಗಳು ಬೈಕ್‌ ಕಳ್ಳತನ ಪ್ರಕರಣದ ಆರೋಪಿಗಳಾಗಿದ್ದರಿಂದ ಈ ಪ್ರಕರಣಕ್ಕೆ ಮಹತ್ವ ಬಂದಿದೆ. ಈ
ಆರೋಪಿಗಳು ಕದ್ದ ಬೈಕ್‌ ಅನ್ನು ಅದರ ಮಾಲೀಕ ಮಲ್ಲನಗೌಡ ಪಾಟೀಲ್‌ಗೆ ಮರಳಿಸಲಾಗಿದ್ದು, ಈ ಬೈಕ್‌ ಸರಣಿ ಸೊ#ಧೀಟದಲ್ಲಿ ಬಳಸಿಲ್ಲ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next