Advertisement

ನವಿಮುಂಬಯಿ: 2021-2022ನೇ ಸಾಲಿನ ಶೈಕ್ಷಣಿಕ ವರ್ಷ ಆನ್‌ಲೈನ್‌ನಲ್ಲಿ ಆರಂಭ

12:58 PM Jun 10, 2021 | Team Udayavani |

ನವಿಮುಂಬಯಿ: ನವಿಮುಂಬಯಿ ಮಹಾನಗರ ಪಾಲಿಕೆಯ 2021-2022ನೇ ಸಾಲಿನ ಶೈಕ್ಷಣಿಕ ವರ್ಷವು ಆನ್‌ಲೈನ್‌ ಮುಖಾಂತರ ಸೋಮವಾರದಿಂದ ಪ್ರಾರಂಭವಾಗಲಿದ್ದು, ಕಳೆದ ಒಂದು ವರ್ಷದಲ್ಲಿ ಶೇ. 55 ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದಾರೆ. ಉಳಿದ ಶೇ. 45ರಷ್ಟು ವಿದ್ಯಾರ್ಥಿಗಳು ಸಂಪರ್ಕದಲ್ಲಿಲ್ಲದ ಕಾರಣ ಈ ವಿದ್ಯಾರ್ಥಿಗಳನ್ನು ಈ ಶೈಕ್ಷಣಿಕ ವರ್ಷಕ್ಕೆ ದಾಖಲಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

Advertisement

ಇದಕ್ಕಾಗಿ ಪುರಸಭೆ ಶಿಕ್ಷಣ ಇಲಾಖೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ನೆಟ್‌ಪ್ಯಾಕ್‌ ನೀಡುವ ಯೋಜನೆಯೂ ಇದೆ. ಆದರೆ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ ಮೊಬೈಲ್‌ ಇಲ್ಲದಿದ್ದರೆ, ಈ ನೆಟ್‌ ಪ್ಯಾಕ್‌ ನೀಡಿ ಏನು ಪ್ರಯೋಜನ ಎಂಬ ಪ್ರಶ್ನೆ ಎದ್ದಿದೆ. ನವಿಮುಂಬಯಿ ಮಹಾನಗರ ಪಾಲಿಕೆಯು 54 ಪ್ರಾಥಮಿಕ ಮತ್ತು 20 ಮಾಧ್ಯಮಿಕ ಶಾಲೆಗಳನ್ನು ಹೊಂದಿದ್ದು, ಸುಮಾರು 40,000 ವಿದ್ಯಾರ್ಥಿಗಳಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭ ಆನ್‌ಲೈನ್‌ ಶಿಕ್ಷಣಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಯಿತು. ವರ್ಕ್‌ಶೀಟ್‌ಗಳು ಮತ್ತು ಆನ್‌ಲೈನ್‌ ಶಿಕ್ಷಣದ ಮೂಲಕ ಶಿಕ್ಷಣ ನೀಡಲು ಪ್ರಯತ್ನಿಸಲಾಯಿತು. ಆದರೆ ಹೆತ್ತವರ ಆರ್ಥಿಕ ಪರಿಸ್ಥಿತಿಯಿಂದಾಗಿ ಅನೇಕ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.

ಜೂ. 14ರಿಂದ ಆನ್‌ಲೈನ್‌  ಶೈಕ್ಷಣಿಕ ವರ್ಷಾರಂಭ

ಮನೆಯಲ್ಲಿರುವ ಏಕೈಕ ಮೊಬೈಲ್ , ನೆಟ್‌ಪ್ಯಾಕ್‌ಗಾಗಿ ಹಣದ ಕೊರತೆ, ಹೆತ್ತವರಿಗೆ ಉದ್ಯೋಗದ ಕೊರತೆ ಹೀಗೆ ವಿವಿಧ ಸಮಸ್ಯೆಗಳಿಂದಾಗಿ ಕಳೆದ ವರ್ಷ ಶೇ. 55ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ ಶಿಕ್ಷಣದಲ್ಲಿ ಭಾಗವಹಿಸಿದ್ದರೆ, ಶೇ. 45ರಷ್ಟು ವಿದ್ಯಾರ್ಥಿಗಳು ಈ ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದರು. 2021-2022ನೇ ಸಾಲಿನ ಶೈಕ್ಷಣಿಕ ವರ್ಷ ಜೂ. 14ರಂದು ಆನ್‌ಲೈನ್‌ ಮೂಲಕ ಪ್ರಾರಂಭವಾಗಲಿದೆ.. ಮೊದಲಾರ್ಧದಲ್ಲಿ ಶಾಲೆಯನ್ನು ಪ್ರಾರಂಭಿಸುವುದು ಅಸಾಧ್ಯವಾದ್ದರಿಂದ ಆನ್‌ಲೈನ್‌ ಶಿಕ್ಷಣವು ಭವಿಷ್ಯದಲ್ಲಿಯೂ ಮುಂದುವರಿಯುದು ಖಚಿತವಾಗಿದೆ.

ಶಿಕ್ಷಣ ಇಲಾಖೆಯಿಂದ ಪ್ರಯತ್ನ

Advertisement

ಹಿಂದಿನ ವರ್ಷದ ಅನುಭವದ ಆಧಾರದ ಮೇಲೆ ನವಿಮುಂಬಯಿ ಮಹಾನಗರ ಪಾಲಿಕೆಯ ಶಾಲೆಗಳಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಶಿಕ್ಷಣದಲ್ಲಿ ಭಾಗವಹಿಸಲು ಶಿಕ್ಷಣ ಇಲಾಖೆ ತನ್ನ ಪ್ರಯತ್ನಗಳನ್ನು ಮುಂದು ವರಿಸಲಿದೆ. ಇದಕ್ಕಾಗಿ ಪ್ರತೀ ತಿಂಗಳು  1,000 ರೂ. ಗಳನ್ನು ವಿದ್ಯಾರ್ಥಿಗಳ  ಬ್ಯಾಂಕ್‌ ಖಾತೆಗೆ ಜಮಾ ಮಾಡಲು ನಿರ್ಧರಿ ಸಲಾಗಿದೆ. ಅಂತೆಯೇ ಹೆತ್ತವರಲ್ಲಿ  ಮೊಬೈಲ್‌ ಇಲ್ಲದ ವಿದ್ಯಾರ್ಥಿಗಳಿಗೆ ಆಯ್ಕೆಗಳನ್ನು ಒದಗಿಸಲು ಪ್ರಯತ್ನಿಸಲಾ ಗುವುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಜಿಒಗಳ ಸಹಾಯ ಪಡೆಯಲಿರುವ ನಿಗಮ ಕ್ರಿಯಾಶೀಲ ಕಿರು ಪುಸ್ತಕಗಳು ಈ ವರ್ಷ ವೂ ಲಭ್ಯವಾಗಲಿವೆ. ಪ್ರತೀ 15 ದಿನಗಳಿಗೊಮ್ಮೆ ಶಿಕ್ಷಕರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಲಿದ್ದು, ವಿದ್ಯಾರ್ಥಿಗಳು ಅಧ್ಯಯನ ಮಾಡಿದ ಪುಸ್ತಕವನ್ನು ತೆಗೆದುಕೊಂಡು  ಹೆಚ್ಚಿನ ಪುಸ್ತಕ ಲಭ್ಯವಾಗುವಂತೆ ಮಾಡಲಿದ್ದಾರೆ. ಆ ವಿದ್ಯಾರ್ಥಿಗಳ ಅಧ್ಯ ಯನವನ್ನು ಮೌಲ್ಯಮಾಪನ ಮಾಡಲೂ ಇದು ಸಾಧ್ಯವಾಗಿಸುತ್ತದೆ. ಆನ್‌ಲೈನ್‌ ಶಿಕ್ಷಣ ಪ್ರಕ್ರಿಯೆಯಲ್ಲಿ ಉತ್ತಮ ಕೆಲಸ ಮಾಡಿದ ಎನ್‌ಜಿಒಗಳ ಸಹಾಯ ವನ್ನೂ ನಿಗಮ ಪಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next