Advertisement

ಕೊಲ್ಲೂರಿನಲ್ಲಿ ದಾಖಲೆಯ 960 ಮಂದಿಯ ಕ್ವಾರಂಟೈನ್‌ ಕೇಂದ್ರ

09:35 PM May 18, 2020 | Sriram |

ಕೊಲ್ಲೂರು: ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ 15 ಕ್ವಾರಂಟೈನ್‌ ಕೇಂದ್ರ ಹೊಂದಿದ್ದು, ಕೊಲ್ಲೂರಿನಲ್ಲಿ ಮಾತ್ರ ದಾಖಲೆಯ 960 ಮಂದಿಯನ್ನು ಇಲ್ಲಿನ ಡಾರ್ಮೆಟರಿ ಸಹಿತ ವಿವಿಧೆಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

ಬೈಂದೂರಿನ ಆಶ್ರಮ ಶಾಲೆ ಹಾಸ್ಟೆಲ್‌, ಬಿ.ಸಿ.ಎಂ.ಹಾಸ್ಟೆಲ್‌, ಸಮಾಜ ಕಲ್ಯಾಣ ಹಾಸ್ಟೆಲ್‌ ಗಳಲ್ಲಿ ಒಟ್ಟು 76 ಮಂದಿ ಕ್ವಾರಂಟೈನ್‌ ನಲ್ಲಿದ್ದಾರೆ. ಹೇರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಾಗೂರು ಸಂದೀಪನ್‌ ಆಂಗ್ಲ ಮಾದ್ಯಮ ಶಾಲೆ ಗಳಲ್ಲಿ ಒಟ್ಟು 293 ಮಂದಿ ಇದ್ದು ಕೊಲ್ಲೂರಿನಲ್ಲಿ ಮಾತ್ರ ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಿಂದ ಆಗಮಿಸಿರುವ ಒಟ್ಟು 960 ಮಂದಿಯನ್ನು ಇಲ್ಲಿನ ಡಾರ್ಮೆಟರಿ ಸಹಿತ ಬಾಲಕ ಬಾಲಕಿಯರ ಹಾಸ್ಟೆಲ್‌ ಗಳಲ್ಲಿ ವಾಸ್ತವ್ಯಕ್ಕೆ ಎಡೆಮಾಡಿರುವುದು ಒಂದು ರೀತಿಯ ಆತಂಕದ ವಾತಾವರಣ ಸೃಷ್ಟಿಸಿದಂತಾಗಿದೆ. ಕಂಬದಕೋಣೆ, ನಾವುಂದ, ಶಿರೂರು, ಉಪ್ಪುಂದ, ಗೋಳಿಹೊಳೆ, ಮರವಂತೆ ಹಾಗೂ ಯಡ್ತರೆಯಲ್ಲಿ ಒಟ್ಟು ಸುಮಾರು 280 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಕ್ವಾರಂಟೈನ್‌ ಗೆ ಕೊಲ್ಲೂರಿನಲ್ಲಿ 1,000 ದಷ್ಟು ಮಂದಿಗೆ ಅವಕಾಶ ಕಲ್ಪಿಸಿರುವುದು ಇರುವ ವ್ಯವಸ್ಥೆಯಲ್ಲಿ ಇಷ್ಟೊಂದು ಮಂದಿಯನ್ನು ಯಾವ ರೀತಿಯಲ್ಲಿ ಸುಧಾರಿಸಬಹುದು ಎಂಬ ಪ್ರಶ್ನೆ ಮೂಡಿದೆ.

ಕ್ವಾರಂಟೈನ್‌ ಗೆ ಒಳಪಡಿಸಿದವರಲ್ಲಿ ಓರ್ವರಿಗೆ ಕೋವಿಡ್‌ ಲಕ್ಷಣ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆತನ ಪರೀಕ್ಷಾ ವರದಿಗಾಗಿ ಕಾಯಲಾಗಿದ್ದು ಆ ಗುಂಪಿನ 33 ಮಂದಿಯನ್ನು ಉಡುಪಿಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next