Advertisement

ಪಡುಬಿದ್ರಿಯಲ್ಲಿ ಕೊಚ್ಚಿ ಹೋದ 9ರ ಬಾಲಕಿಯ ಶವ ಪತ್ತೆ 

09:37 AM May 30, 2018 | |

ಉಡುಪಿ: ಪಡುಬಿದ್ರಿ ಸಮೀಪದ ಪಾದೆಬೆಟ್ಟು ಪಟ್ಲದಲ್ಲಿ  ಮಂಗಳವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದ 9 ರ ಹರೆಯದ ಬಾಲಕಿ ನಿಧಿ ಶವ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. 

Advertisement

ಸಹೋದರಿಯೊಂದಿಗೆ ಶಾಲೆಗೆ ಹೋಗಿದ್ದಪಡುಬಿದ್ರಿಯ ಎಸ್‌ಬಿವಿಪಿ ಹಿ.ಪ್ರಾ.ಶಾಲೆಯ 4ನೇತರಗತಿ ವಿದ್ಯಾರ್ಥಿನಿ ನಿಧಿನೆರೆಯ ನೀರಿನಲ್ಲಿ ಕೊಚ್ಚಿಹೋಗಿದ್ದಳು, ಜೊತೆಯಲ್ಲಿದ್ದ ಅಕ್ಕ ನಿಶಾನನ್ನು ಸ್ಥಳೀಯರು ರಕ್ಷಿಸಿದ್ದರು. 

ನಿನ್ನೆಯಿಡಿ ಸ್ಥಳೀಯರು ಹುಡುಕಾಡಿದರು ಶವ ಪತ್ತೆಯಾಗಿರಲ್ಲಿಲ್ಲ. ಇಂದು ಬೆಳಗ್ಗೆ ಹುಡುಕಾಡಿದಾಗ ಕೊಚ್ಚಿ ಹೋದ ಸ್ಥಳದಿಂದ ನೂರು ಮೀಟರ್‌ ದೂರದಲ್ಲಿ ಶವ ಪತ್ತೆಯಾಗಿದೆ. ಶಾಲಾ ಬ್ಯಾಗ್‌ ಬೆನ್ನಿಗೆ ಹಾಕಿ ಕೊಂಡ ಸ್ಥಿತಿಯಲ್ಲೇ ಶವ ಪತ್ತೆಯಾಗಿದೆ. 

ತಂದೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next