Advertisement

ತುಂಗಾ ನದಿಯಲ್ಲಿ 45 ಕಿಮೀ ಸಂಚರಿಸಿ ಸಾಹಸ ಮೆರೆದ ತಂಡ

03:15 PM Aug 08, 2020 | mahesh |

ಶಿವಮೊಗ್ಗ: ಸಾಹಸಿ ಅ.ನಾ. ವಿಜಯೇಂದ್ರರಾವ್‌ ತಂಡ ಶುಕ್ರವಾರ ಬೆಳಗ್ಗೆ ಶಿವಮೊಗ್ಗದ ಕೊರ್ಪಲಯ್ಯನ ಛತ್ರದಿಂದ ತುಂಬಿರುವ ತುಂಗಾ ನದಿಯಲ್ಲಿಕಯಾಕಿಂಗ್‌ (ಎರಡು ಜನ ಕೂಡುವ ದೋಣಿ) ಮೂಲಕ ಹೊನ್ನಾಳಿ ತಾಲೂಕಿನ ರಾಂಪುರದವರೆಗೆ ಸುಮಾರು 45 ಕಿ.ಮೀ. ದೂರ ಕ್ರಮಿಸಿ ಸಾಹಸ ಮೆರೆದಿದ್ದಾರೆ.

Advertisement

ಪ್ರತಿ ಬಾರಿಯೂ ಇಂತಹ ಸಾಹಸ ಮಾಡುವಾಗ ಅವರು ಸಾಮಾಜಿಕ ವಿಷಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುತ್ತಿದ್ದು, ಈ ಬಾರಿ ರಾಂಪುರದ ದನಗಳ ಜಾತ್ರೆ ವಿಷಯವನ್ನಿಟ್ಟುಕೊಂಡು ದೂರ ಪ್ರಯಾಣ ಕೈಗೊಂಡಿದ್ದು, ಇದರ ಜತೆಗೆ ವಿಪತ್ತಿನ ಸಮಯದಲ್ಲಿ ಹೇಗೆ ರಕ್ಷಣೆ ಮಾಡಬಹುದು, ಮಾಡಿಕೊಳ್ಳಬಹುದು ಎಂಬ ಹಿನ್ನೆಲೆ ಮತ್ತು ತರಬೇತಿಗಾಗಿ ಈ ಬಾರಿಯ ಪಯಣ ಸಾಗಿದೆ ಎಂದು ಸಾಹಸಿ ಅ.ನಾ. ವಿಜಯೇಂದ್ರ ತಿಳಿಸಿದ್ದಾರೆ. ಇದೊಂದು ಸುಂದರ ಅನುಭವ. ತುಂಬಿದ ತುಂಗೆಯಲ್ಲಿ ಅಪಾಯಕಾರಿ ಸುಳಿಗಳಿರುತ್ತವೆ. ಬೇಡ ಎಂದು ಹೇಳಿದ್ದರು. ಆದರೆ ಈಗಾಗಲೇ ಇಂತಹ ಅನೇಕ ಸಾಹಸ ಮಾಡಿರುವುದರಿಂದ ಹಾಗೂ ಅನುಭವ ಇರುವುದರಿಂದ ಇದೇನು ತೊಂದರೆಯಾಗಲಾರದೆಂಬ ಆತ್ಮವಿಶ್ವಾಸದೊಡನೆ ಈ ಪ್ರಯಾಣ ಕೈಗೊಂಡಿದ್ದೆವು. ಅ.ನಾ. ವಿಜಯೇಂದ್ರರಾವ್‌, ಶ್ರೀನಾಥ್‌ ನಗರಗದ್ದೆ, ಸಾಸ್ವೆಹಳ್ಳಿ ಸತೀಶ್‌, ಹರೀಶ್‌ ಪಟೇಲ್‌, ಅ.ನಾ. ಶ್ರೀಧರ್‌ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next