Advertisement

ಜಿಲ್ಲೆಯಲ್ಲಿ 29 ಇಂಗ್ಲಿಷ್‌ ಮಾಧ್ಯಮದ ಸರ್ಕಾರಿ ಶಾಲೆ ಆರಂಭ

02:23 PM May 03, 2019 | pallavi |

ಹಾಸನ: ರಾಜ್ಯ ಸರ್ಕಾರ 2019 20ನೇ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದಲ್ಲಿ 1ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಸರ್ಕಾರ ದಿಂದಲೇ ಆರಂಭಿಸಲು ನಿರ್ಧರಿಸಿದ್ದು, ಜೂನ್‌ನಿಂದ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದ ಸರ್ಕಾರಿ ಶಾಲೆಗಳು ಆರಂಭವಾಗಲಿವೆ. ಹಾಸನ ಜಿಲ್ಲೆಯಲ್ಲಿ ಒಟ್ಟು 29 ಇಂಗ್ಲಿಷ್‌ ಮಾಧ್ಯಮದ ಸರ್ಕಾರಿ ಶಾಲೆಗಳು ಆರಂಭವಾಲಿವೆ.

Advertisement

ಸಕಲೇಶಪುರ, ಆಲೂರು ಕ್ಷೇತ್ರಕ್ಕೆ ಹೆಚ್ಚು: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ತಲಾ 4 ಇಂಗ್ಲಿಷ್‌ ಮಾಧ್ಯಮದ ಶಾಲೆಗಳ ಮಂಜೂರಾತಿಯ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಆ ಪೈಕಿ ಸಕಲೇಶಪುರ ಆಲೂರು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ 5 ಶಾಲೆ ಗಳು ಮಂಜೂರಾಗಲಿವೆ. ಸಕಲೇಶಪುರ ವಿಧಾನಸಭಾ ಕ್ಷೇತ್ರ ವಿಸ್ತಾರ ವಾದ ಮತ್ತು ಮೂರು ತಾಲೂಕುಗಳನ್ನು ಒಳಗೊಳ್ಳುವುದರಿಂದ ಇಂಗ್ಲಿಷ್‌ ಮಾಧ್ಯಮದ ಒಂದು ಶಾಲೆಯನ್ನು ಹೆಚ್ಚುವರಿಯಾಗಿ ಮಂಜೂರಾತಿಯ ಪ್ರಸ್ತಾವನೆಯಿದೆ.

ಪಬ್ಲಿಕ್‌ ಶಾಲೆಗಳಲ್ಲಿ ಆರಂಭ: ಜಿಲ್ಲೆಯಲ್ಲಿ ಹಾಲಿ ಇರುವ 9 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿಯೇ ಒಂದನೇ ತರಗತಿಯಿಂದ ಆರಂಭವಾಗುವ ಇಂಗ್ಲಿಷ್‌ ಮಾಧ್ಯಮ ಆರಂಭವಾಗಲಿದ್ದು, ಇನ್ನುಳಿದ 20 ಶಾಲೆಗಳನ್ನು ಹೊಸದಾಗಿ ಆಯ್ಕೆ ಮಾಡಲಾಗಿದೆ. ಹೋಬಳಿ ಕೇಂದ್ರ ಅಥವಾ ದೊಡ್ಡ ಗ್ರಾಮಗಳಲ್ಲಿ ಈಗಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಕನ್ನಡ ಮಾಧ್ಯಮದ ಜೊತೆಗೇ ಇಂಗ್ಲಿಷ್‌ ಮಾಧ್ಯಮದ ಬೋಧನೆ ಒಂದನೇ ತರಗತಿಯಿಂದ ಆರಂಭವಾಗಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಅಥವಾ ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸಬಹುದು.

ಅರಕಲಗೂಡು ವಿಧಾನಸಭಾ ಕ್ಷೇತ್ರ: ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವಾಪಟ್ಟಣ (ಕೆಪಿಎಸ್‌), ಸರ್ಕಾರಿ ಪದವಿ ಪೂರ್ವ ಕಾಲೇಜು, ದೊಡ್ಡಮಗ್ಗೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅರಕಲಗೂಡು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಳ್ಳಿ ಮೈಸೂರು,

ಅರಸೀಕೆರೆ ವಿಧಾನಸಭಾ ಕ್ಷೇತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಣಾವರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುವಂಕ (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಂದೇನಹಳ್ಳಿ ಗಡಿ (ಕೆಪಿಎಸ್‌), ಅರಸೀಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

Advertisement

ಬೇಲೂರು ವಿಧಾನಸಭಾ ಕ್ಷೇತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆಬೀಡು (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿ ಅಥವಾ ಹಲ್ಮಿಡಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಗರೆ, ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರು.

ಹಾಸನ ವಿಧಾನಸಭಾ ಕ್ಷೇತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈಲಹಳ್ಳಿ (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಣಿ ವಿಲಾಸ ಹಾಸನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಹಾಸನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆನ್‌ಷನ್‌ ಮೊಹಲ್ಲಾ ಹಾಸನ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆನೆಕೆರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಸಳೆ ಹೊಸಹಳ್ಳಿ (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರಿಹರಪುರ (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟೆ, ಹೊಳೆನರಸೀಪುರ.

ಸಕಲೇಶಪುರ ಆಲೂರು ವಿಧಾನಸಭಾ ಕ್ಷೇತ್ರ: ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಯರಕೊಪ್ಪಲು (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆತ್ತೂರು (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಕಲೇಶಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾನುಬಾಳು (ಕೆಪಿಎಸ್‌).

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ: ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನುಗ್ಗೇಹಳ್ಳಿ (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನರಾಯಪಟ್ಟಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೇಗಲಕೇರಿ ಚನ್ನರಾಯಪಟ್ಟಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೇಟೆ, ಚನ್ನರಾಯಪಟ್ಟಣ.

Advertisement

Udayavani is now on Telegram. Click here to join our channel and stay updated with the latest news.

Next