Advertisement
ಉತ್ತರಾಧಿಕಾರಿ ಶ್ರೀ ಬಸವಲಿಂಗ ದೇವರು ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಗದ್ದುಗೆಗೆ ಎರಡು ಹೊತ್ತು ಪೂಜೆ ಮಾಡುತ್ತ,ಭಕ್ತರ ಒಪ್ಪಿಗೆ ಮೇರೆಗೆ ಎಂಟು ತಿಂಗಳಿಂದ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಠದ ಗದ್ದುಗೆ ಎದುರಿನಲ್ಲಿ ಮಲಗಿದ್ದಾಗ ಕನಸು ಬಿತ್ತು ಎನ್ನಲಾಗಿದೆ. “ಮಠದಲ್ಲಿ ಕತ್ತಲು ತುಂಬಿಕೊಂಡಿದೆ. ಅಭಿವೃದ್ಧಿಗೆ ಗಮನ ಹರಿಸಬೇಕು’ ಎಂದು ಕನಸಿನಲ್ಲಿ ಪ್ರೇರಣೆ ಆಗಿರುವುದನ್ನು ಉತ್ತರಾಧಿಕಾರಿ ಶ್ರೀ ಬಸವಲಿಂಗ ದೇವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗ ಮಾಡಿದರು. ಆಗ ಭಕ್ತರು, “ಬೇಡ, ನೂರಾರು ವರ್ಷಗಳಿಂದ ಹಿಂದಿನ ಸ್ವಾಮಿಗಳಾÂರೂ
ಬಾಗಿಲು ತೆಗೆಸಿಲ್ಲ. ಈಗ ತೆರೆಯುವುದು ಬೇಡ. ಏಳು ಹೆಡೆ ಸರ್ಪವಿದೆ, ಶನಿಕಾಟ ಹತ್ತುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದ್ದರು.
“ಮೂಢನಂಬಿಕೆ ಬೇಡ. ಮಠದ ಕೋಣೆ ಬಳಕೆಗೆ ಬಾರದಂತೆ ಸಮ್ಮನೆ ಬಿಟ್ಟರೆ ಏನು ಪ್ರಯೋಜನ? ತೆಗೆದು ನೋಡೋಣ. ಏನಾದರೂ ಆಗುವುದಿದ್ದರೆ ನನಗೇ ಆಗಲಿ. ಊರವರಿಗೆ ಏನೂ ಆಗುವುದಿಲ್ಲ. ಮೂಢನಂಬಿಕೆ, ಕಂದಾಚಾರ ತೊಡೆದು ಹಾಕಬೇಕು’ ಎಂದು ಮನವೊಲಿಸಿದಾಗ ಭಕ್ತರು ಸಮ್ಮತಿ ಸೂಚಿಸಿದರು. ಬಳಿಕ ಮುಚ್ಚಿದ ಬಾಗಿಲು ತೆರೆದು ಸ್ವತ್ಛ ಮಾಡುವಾಗ ಹಲವು ಮಹತ್ವದ ಸಾಮಗ್ರಿಗಳು ದೊರೆತವು ಎಂದು ಬವಸಲಿಂಗ ದೇವರು ಮಾಹಿತಿ ನೀಡಿದರು. ಹಲವು ವಸ್ತುಗಳು ಪತ್ತೆ: ಕೋಣೆ ಬಾಗಿಲು ತೆಗೆದು ಉತVನನ ಮಾಡುತ್ತ ಮುಂದುವರಿದಾಗ ಮೊದಲಿಗೆ ಎತ್ತರದ ಕಂಚಿನ ತೇರು, ಗಂಟೆ, ಜಾಗಟೆಗಳು, ಮಂಗಳಾರತಿ ಸಲಕರಣೆಗಳು, ಧೂಪ ಹಚ್ಚುವ ಚಮಚ, ನಾಗದೇವತೆ ಮುಖದ
ಹಿತ್ತಾಳೆ ನಾಗಬಿಂದಿಗೆ, ಹಿತ್ತಾಳೆ ಪಾದುಕೆ, ತ್ರಿಶೂಲ, ಖಡ್ಗ, ದೀಪ, ಗಂಟೆ, ಬೆಳ್ಳೆ, ಕಮಂಡಲ, ತಂಬಿಗೆ, ತಟ್ಟೆ ಹಾಗೂ ನಗಾರಿ, ಆವುಗೆ, ಹೂಕುಂಡ, ದೀಪ ಹಚ್ಚುವ ಪಣತಿ, ರುದ್ರಾಕ್ಷಿ ರುದ್ರದೇವರ ಮೂರ್ತಿ, ತಾಮದ್ರ ನಾಣ್ಯಗಳು ದೊರೆತು
ಅಚ್ಚರಿ ಮೂಡಿಸಿವೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯ ರಚಿಸಲು ಬಳಸಲಾಗುತ್ತಿದ್ದ ತಾಡೋಲೆ ಕಟ್ಟು ಮತ್ತು ನಿಜಾಮರ ಕಾಲದ ಎಂಟು ನಾಣ್ಯಗಳೂ ದೊರೆತಿವೆ.