Advertisement

ಕಲ್ಲೆಳೆದು ಬಲ ಪ್ರದರ್ಶಿಸಿದ ಎತ್ತುಗಳು

11:37 AM Feb 14, 2019 | Team Udayavani |

ತಾವರಗೇರಾ: ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಬುಧುವಾರ 1.5 ಟನ್‌ ತೂಕದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು. ಕೃಷಿ ಉತ್ಪನ್ನ ಉಪ ಮಾರುಕಟ್ಟೆ, ವೀರಭದ್ರೇಶ್ವರ ಜಾತ್ರಾ ಸಮಿತಿ, ಹಾಲು ಒಕ್ಕೂಟಗಳ ಆಶ್ರಯದಲ್ಲಿ ಎಪಿಎಂಸಿ ಆವರಣದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

Advertisement

ನಂತರ ಸ್ಥಳೀಯ ಪೊಲೀಸ್‌ ಠಾಣೆಯ ಪಿಎಸ್‌ಐ ಮಹಾಂತೇಶ ಸಜ್ಜನ ಮಾತನಾಡಿ, ರೈತರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎತ್ತುಗಳ ಬಲ ಪ್ರದರ್ಶನ ಮಾಡುತ್ತಿದ್ದಾರೆ. ಬರಗಾಲ ಸಮಯದಲ್ಲಿ ರೈತನ ಮುಖ್ಯ ಜೀವನಾಡಿ ಎತ್ತುಗಳನ್ನು ಘೋಷಣೆ ಮಾಡಿ, ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ. ರೈತರು ಮಳೆ ಬೆಳೆ ಕೊರತೆಯಿಂದ ನಷ್ಟದಲ್ಲಿದ್ದು, ನಾವು ಎಲ್ಲರೂ ನೀರು ಉಳಿಸುವ ಮತ್ತು ಪರಿಸರ ಉಳಿಸದರೆ ಮಾತ್ರ ನಮಗೆ ಸೂಕ್ತ ವಾತಾವರಣ ಸಿಗಲಿದೆ. ಆದ್ದರಿಂದ ರಾಯನಕೆರೆ ಹೊಳೆತ್ತುವ ಕಾರ್ಯಕ್ಕೆ ಎಲ್ಲರೂ ಸಿದ್ಧರಾಗಿದ್ದೇವೆ. ಕೆರೆಯಲ್ಲಿ ನೀರು ಸಂಗ್ರಹವಾದರೆ ನಮ್ಮ ಪಟ್ಟಣಕ್ಕೆ ನೀರಿನ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.

ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಶ್ರೀ ಗುರಯ್ಯಸ್ವಾಮಿಗಳು ಹಾಗೂ ಸ್ಥಳೀಯ ಪಿಎಸ್‌ಐ ಚಾಲನೆ ನೀಡಿದರು. ಕರಡೆಪ್ಪ ನಾಲತವಾಡ, ಮರಿಬಸಪ್ಪ ಸಜ್ಜನ್‌, ವಿರುಪಣ್ಣ ನಾಲತವಾಡ, ವೀರಭದ್ರಪ್ಪ ನಾಲತವಾಡ, ಬಸನಗೌಡ ಮಾಲಿಪಾಟೀಲ, ಆದಪ್ಪ ನಾಲತವಾಡ, ರುದ್ರಗೌಡ ಕುಲಕರ್ಣಿ, ನಿಂಗಪ್ಪ ಬಡಿಗೇರ, ಸಂತೋಷ ಸರನಾಡಗೌಡ ಇದ್ದರು. ಹಂಚಿನಾಳ ಗ್ರಾಮದ ಶರಣಪ್ಪ ಗುಡಿಹಿಂದಲ್‌ ಅವರ ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆಯಲ್ಲಿ 500 ಮೀಟರ್‌ ಅಂತರವನ್ನು 1.10 ನಿಮಿಷ ಕ್ರಮಿಸಿ ಪ್ರಥಮ ಬಹುಮಾನವಾಗಿ 5 ಗ್ರಾಮ ಚಿನ್ನ ಪಡೆದವು. 3.48 ನಿಮಿಷದಲ್ಲಿ ಗುರಿ ತಲುಪಿದ ಮಲ್ಲಪ್ಪ ರಾಂಪೂರ ಅವರ ಎತ್ತುಗಳು ದ್ವಿತೀಯ ಬಹುಮಾನ (11 ತೊಲೆ ಬೆಳ್ಳಿ), 3.55 ನಿಮಿಷಗಳಲ್ಲಿ ಕ್ರಮಿಸಿದ ವಿಠಲಾಪುರ ಗ್ರಾಮದ ರೈತ ಅಡಿವೆಪ್ಪ ಮುದ್ದಲಗುಂದಿ ಇವರ ಎತ್ತುಗಳು (8 ತೊಲೆ ಬೆಳ್ಳಿ) ತೃತೀಯ ಸ್ಥಾನ ಪಡೆದವು.

Advertisement

Udayavani is now on Telegram. Click here to join our channel and stay updated with the latest news.

Next