Advertisement
ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಗಳೇನಿಲ್ಲ. ಟೀನೇಜ್‌ನಲ್ಲಿ ಹುಡುಗ, ಹುಡುಗಿ ನಡುವೆ ನಡೆಯೋ ಸಿಂಪಲ್ ಲವ್‌ಸ್ಟೋರಿ ಇಲ್ಲೂ ಇದೆಯಾದರೂ ಅಲ್ಲಲ್ಲಿ ಹೊಸ ವಿಷಯ ಬೆರೆಸಿ, ಕೊಂಚ ಹದಗೊಳಿಸಿ ಸುಮ್ಮನೆ ನೋಡಿಸಿಕೊಂಡು ಹೋಗುವಂತೆ ಮಾಡಿರುವ ಪ್ರಯತ್ನ ಮೆಚ್ಚಬೇಕು. ಹೊಸದಾಗಿ ಹುಟ್ಟಿಕೊಂಡ ಪ್ರೀತಿಯನ್ನು ಪ್ರೇಮಿಗಳು ಹೇಗೆ ಆರಾಧಿಸುತ್ತಾರೆ ಅನ್ನೋದು ಎಷ್ಟು ಸೊಗಸಾಗಿರುತ್ತೋ, ಅಷ್ಟೇ ಮಜವಾಗಿ ಮೊದಲರ್ಧ ಸಾಗುತ್ತದೆ.
Related Articles
Advertisement
ಒಂದು ಮನೆ. ಆ ಮನೆಯ ಮಹಡಿ ಮೇಲೆ ವರ್ಷ ಕುಟುಂಬ ವಾಸವಿದ್ದರೆ, ಕೆಳಗೆ ವರುಣ್ ಫ್ಯಾಮಿಲಿ ವಾಸ. ಮೊದಲ ನೋಟದಲ್ಲೇ ವರುಣ್, ವರ್ಷಳ ಅಂದಕ್ಕೆ ಫಿದಾ ಆಗಿರುತ್ತಾನೆ. ಮೆಲ್ಲನೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗುತ್ತೆ. ಇಬ್ಬರ ಪ್ರೀತಿ ವಿಷಯ ವರ್ಷ ಮನೆಯವರಿಗೆ ಗೊತ್ತಾಗಿ, ಅದು ಬ್ರೇಕ್ ಅಪ್ ಆಗುವ ಹಂತಕ್ಕೂ ಹೋಗುತ್ತೆ.
ಅದು ಹೇಗೆ ಎಂಬುದನ್ನೇ ನಿರ್ದೇಶಕರು ಜಾಣತನದಿಂದ ಆಗಾಗ ಫ್ಲ್ಯಾಶ್‌ಬ್ಯಾಕ್ ಸ್ಟೋರಿಗಳನ್ನು ತೋರಿಸುತ್ತ, ಇಬ್ಬರ ಪ್ರೀತಿಯೊಳಗಿನ ಕಥೆ, ವ್ಯಥೆಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಪ್ರೇಮಿಯ ಕನಸು ಈಡೇರಿಸುವ ಸಲುವಾಗಿ ಅವನು ಮನೆಯವರನ್ನು ಬಿಟ್ಟು, ಇರುವ ಕೆಲಸವನ್ನೂ ಲೆಕ್ಕಿಸದೆ ಅವಳೊಂದಿಗೆ ಜರ್ನಿ ಶುರು ಮಾಡುತ್ತಾನೆ. ಆರಂಭದಲ್ಲಿ ಚೆನ್ನಾಗಿಯೇ ಇರುವ ಪ್ರೀತಿ, ಅಲ್ಲಲ್ಲಿ ಬಿರುಕು ಬಿಟ್ಟುಕೊಳ್ಳುತ್ತೆ. ಹತಾಶೆ, ಬೇಸರ, ಕೋಪ, ತಾಪಗಳ ನಡುವೆ ಪ್ರೀತಿ ಬಹಳ ದಿನ ಉಳಿಯೋದಿಲ್ಲ.
ಆಮೇಲೆ ಏನಾಗುತ್ತೆ ಅನ್ನೋದೇ ಚಿತ್ರದ ಹೈಲೈಟ್. ನಾಯಕ ರೇಣು ಮಠದ ಅವರ ನಟನೆಯಲ್ಲಿ ಲವಲವಿಕೆ ಇದೆ. ಅಮಿತಾ ಕುಲಾಲ್, ಬೋಲ್ಡ್ ಹುಡುಗಿಯಾಗಿ ಗಮನಸೆಳೆದರೂ ನಟನೆಯಲ್ಲಿನ್ನೂ ದೂರ ಸಾಗಬೇಕಿದೆ. ರಾಮಕೃಷ್ಣ, ತ್ರಿವೇಣಿ ಸಿಕ್ಕ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ರವಿ ಕಿಶೋರ್ ಛಾಯಾಗ್ರಹಣದಲ್ಲಿ ಹರ್ಷ ತುಂಬಿದೆ.
ಚಿತ್ರ: ಆ ಎರಡು ವರ್ಷಗಳುನಿರ್ಮಾಣ: ರಿಷಿಕಾ ಮಧುಸೂದನ್
ನಿರ್ದೇಶನ: ಮಧುಸೂದನ್
ತಾರಾಗಣ: ರೇಣು ಮಠದ, ಅಮಿತಾ ಕುಲಾಳ್, ರಾಮಕೃಷ್ಣ, ತ್ರಿವೇಣಿ ಇತರರು. * ವಿಜಯ್ ಭರಮಸಾಗರ