Advertisement

ತಂಗಂ ಆಗಿದ್ದು ಅಮ್ಮನಿಗಾಗಿ! ತಾಯಿಯ ಆಸೆ ಪೂರೈಸಿದ ಯೋಗಿ

03:50 AM Jul 07, 2017 | Harsha Rao |

ಯೋಗಿ ಒಂಟಿ ಹೀರೋ ಆಗಿ ಅಭಿನಯಿಸಿದ ಚಿತ್ರ ಬಿಡುಗಡೆಯಾಗಿ ಬಹಳ ದಿನಗಳೇ ಆಗಿದ್ದವು. ಹಾಗೆ ಬಿಡುಗಡೆಯಾದ ಕೊನೆಯ ಚಿತ್ರವೆಂದರೆ ಅದು “ಕಾಲಭೈರವ’. ಈಗ ಯೋಗಿ ಅಭಿನಯದ “ಕೋಲಾರ 1990′ ಚಿತ್ರ ಇವತ್ತು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅವರು ತಂಗಂ ಎಂಬ ಕೋಲಾರದ ಹಳೆಯ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ.
“ತಂಗಂ ಬಗ್ಗೆ ಕೇಳಿದ್ದೆ. ನೋಡಿರಲಿಲ್ಲ. ನಾನು ಹುಟ್ಟಿ ಏಳು ವರ್ಷಕ್ಕೆಲ್ಲಾ ತಂಗಂ ಹೋದರು. ಇಲ್ಲಿ ಆತ ಒಳ್ಳೆಯವನೋ, ಕೆಟ್ಟವನೋ ಎಂದು ಚರ್ಚಿಸೋಕೆ ಹೋಗಿಲ್ಲ. ಪರಿಸ್ಥಿತಿಗಳು ಹೇಗೆØàಗೆ ಇತ್ತು ಅನ್ನೋದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಆತ ಒಳ್ಳೆಯವನೋ, ಕೆಟ್ಟವನೋ ಎಂಬುದನ್ನು ಜನ ತೀರ್ಮಾನಿಸಬೇಕು. ಇದಕ್ಕೂ ಮುನ್ನ ಒಂದಿಷ್ಟು ರೌಡಿಸಂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಇದೇ ಮೊದಲ ಬಾರಿಗೆ ರಿಯಲ್‌ ಲೈಫ್ ಪಾತ್ರವೊಂದನ್ನು ಮಾಡಿದ್ದೇನೆ, ಈ ತರಹ ಪಾತ್ರ ಮಾಡಬೇಕು ಅಂತ ಆಸೆ ಇತ್ತು. ನನಗಿಂತ ನಮ್ಮಮ್ಮನಿಗೆ ಹೆಚ್ಚು ಇಷ್ಟ ಆಯ್ತು. ಅವರಿಗಾಗಿ ಈ ಪಾತ್ರವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಯೋಗಿ.

Advertisement

ಇನ್ನು ಚಿತ್ರದ ಚಿತ್ರೀಕರಣ ಸಮಯವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಅವರು. “ನಾವು ಚಿತ್ರೀಕರಣ ಮಾಡಿದ್ದೆಲ್ಲಾ ಕೋಲಾರದಲ್ಲೇ. ಚಿತ್ರೀಕರಣ ನೋಡೋಕೆ ತಂಗಂ ಕಡೆಯವರು ಬರೋರು. ಆಗೆಲ್ಲಾ ಭಯ ಆಗೋದು. ಮುಹೂರ್ತದ ದಿನವಂತೂ, ತಂಗಂ ಮಚ್ಚ ಒಬ್ಬ ನೇರವಾಗಿ ಕಾರವಾನ್‌ಗೆ ಬಂದುಬಿಟ್ಟ. “ನಮ್ಮವನ ಬಗ್ಗೆ ಚಿತ್ರ ಮಾಡ್ತೀರಂತೆ, ಸರಿಯಾಗಿ ಮಾಡಬೇಕು’ ಎಂದು ಹೇಳಿ ಹೋದ. ನಾನು ಮುಂಚೆ ರೌಡಿ ಪಾತ್ರಗಳನ್ನ ಮಾಡಿದ್ದೆ. ಯಾವತ್ತೂ ಹೀಗೆಲ್ಲಾ ಆಗಿರಲಿಲ್ಲ. 

ಅವರ ಮಧ್ಯದಲ್ಲಿದ್ದವನ ಕಥೆ. ಅ¨‌ೂಅಲ್ಲದೆ ಚಿತ್ರೀಕರಣ ಮಾಡಿ¨‌ೂª ಅಲ್ಲೇ. ಹಾಗಾಗಿ ಹ್ಯಾಂಡಲ್‌ ಮಾಡೋದು ಸ್ವಲ್ಪ ಕಷ್ಟ ಆಯ್ತು. ಎಷ್ಟೋ ಬಾರಿ ಇಂಥದ್ದೊಂದು ಸಿನಿಮಾ ಮಾಡುತ್ತಿರುವುದಕ್ಕೆ ಜನ ಶಾಪ ಹಾಕೋರು. ಅವನ ಸಿನಿಮಾ ಮಾಡ್ತಿರುವ ನೀವು ಹಾಳಾಗಿ ಹೋಗ್ತಿàರಾ ಅನ್ನೋರು. ನನಗೆ ಇಷ್ಟೆಲ್ಲಾ ಆಗಬಹುದು ಎಂದು ಗೊತ್ತಿರಲಿಲ್ಲ. ಆದರೂ
ಇದೊಂದು ವಿಭಿನ್ನ ಅನುಭವ’ ಎನ್ನುತ್ತಾರೆ ಯೋಗಿ.

ಇನ್ನು ತಂಗಂ ಪಾತ್ರ ಮಾಡುವುದಕ್ಕೆ ಯೋಗಿಗೆ ಸಹಾಯ ಮಾಡಿದ್ದು ತಂಗಂ ಸ್ನೇಹಿತ ಬಾಲ. “ಬಾಲ ಒಬ್ಬ ಇನ್ನೂ
ಬದುಕಿದ್ದಾನೆ. ಪೊಲೀಸರು ಅವನನ್ನ ಎನ್‌ ಕೌಂಟರ್‌ ಮಾಡದೆ ಬಿಟ್ಟಿದ್ದಾರೆ. ಅವನನ್ನು ಕೂರಿಸಿಕೊಂಡು ತಂಗಂ ಬಗ್ಗೆ ಒಂದಿಷ್ಟು ಮಾಹಿತಿ ಪಡೆದು, ಹಲವು ವಿಚಾರಗಳನ್ನ ತಿಳಿದುಕೊಂಡು ಪಾತ್ರ ಮಾಡಿದೆ. ಚಿತ್ರದಲ್ಲಿ ನಾನು ತಂಗಂ ಪಾತ್ರ
ಮಾಡಿದರೆ, ಶಿವಮಂಜು ಅವರು ಬಾಲನ ಪಾತ್ರವನ್ನು ಮಾಡಿದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ ಯೋಗಿ.

ಈ ಚಿತ್ರ ಶುರುವಾಗಿದ್ದು ಮೂರೂವರೆ ವರ್ಷಗಳ ಹಿಂದೆ. ಕಾರಣಾಂತರಗಳಿಂದ ತಡವಾಗಿ ಇದೀಗ ಬಿಡುಗಡೆಯಾಗುತ್ತಿದೆ. “ಬಹಳ ಕಷ್ಟಪಟ್ಟು ಈ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಚಿತ್ರ ಮಾಡೋದೇ ಕಷ್ಟ ಎನ್ನುವಾಗ,
ಬಿಡುಗಡೆ ಮಾಡೋದು ಇನ್ನೂ ಕಷ್ಟ. ಆದರೂ ಯಾರ್ಯಾರನ್ನೋ ಹಿಡಿದು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ.
ಆದಿತ್ಯ ಮೆನನ್‌ ಅವರಿಗೆ ಒಂದೊಳ್ಳೆಯ ಪಾತ್ರ ಇದೆ. ಮಹೇಶ್‌ ಬಹಳ ಚೆನ್ನಾಗಿ ಚಿತ್ರ ಮಾಡಿದ್ದಾರೆ’ ಎನ್ನುತ್ತಾರೆ ಯೋಗಿ.

Advertisement

– ಭುವನ್‌

Advertisement

Udayavani is now on Telegram. Click here to join our channel and stay updated with the latest news.

Next