Advertisement

ಥಾಣೆ: ಮೀನಾಕ್ಷಿ ಆರ್‌. ಪೂಜಾರಿಗೆ ಜಯ

05:01 PM Feb 24, 2017 | |

ಥಾಣೆ: ಥಾಣೆ ಮಹಾನಗರ ಪಾಲಿಕೆ (ಟಿಎಂಸಿ) ಗೆ ಕಳೆದ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಮಾನಾ³ಡ ಮನೋರಮಾ ನಗರದ 3-ಸಿ ವಾರ್ಡ್‌ ನಿಂದ ಶಿವಸೇನೆಯಿಂದ ಸ್ಪರ್ಧಿಸಿದ್ದ  ದಿ| ಗುರುವ ಕಾಂತಪ್ಪ ಪೂಜಾರಿ ಅವರ ಪುತ್ರಿ ಹಾಲಿ ನಗರ ಸೇವಕಿ ಮೀನಾಕ್ಷಿ ರಾಜೇಂದ್ರ ಶಿಂಧೆ (ಪೂಜಾರಿ) ಅವರು   ಜಯಭೇರಿ ಪಡೆದು ಹ್ಯಾಟ್ರಿಕ್‌ ಸಾಧಿಸಿದ್ದಾರೆ.

Advertisement

ಮೀನಾಕ್ಷಿ   ಅವರು ಮೂಲತಃ  ಕಟಪಾಡಿ ಎಣಗುಡ್ಡೆ ನಿವಾಸಿಯಾಗಿದ್ದು, ಅವರು ಬಿಜೆಪಿ ಪ್ರತಿಸ್ಪರ್ಧಿ ದೀಪ್‌ಮಾಲ ಮಾಡ್ವಿ ಅವರಗಿಂತ ಸುಮಾರು 2,800 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಮಾತ್ರವಲ್ಲದೆ ನಿರಂತರ ಮೂರನೇ ಬಾರಿ ಸ್ಪರ್ಧಿಸಿ ವಿಜೇತರೆಣಿಸಿದ ತುಳುಕನ್ನಡತಿ ಅವರದ್ದಾಗಿದ್ದಾರೆ. ಈ ವಾರ್ಡ್‌ನಿಂದ ಎಂಎನ್‌ಎಸ್‌ ಸೇರಿದಂತೆ ಕೇವಲ ಮೂರು ಪಕ್ಷಗಳ ಅಭ್ಯರ್ಥಿಗಳಷ್ಟೇ ಸ್ಪರ್ಧಿಸಿದ್ದು ತ್ರಿಕೋಣ ಸ್ಪರ್ಧೆ ಏರ್ಪಾಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next