Advertisement

Thailand; 37 ವರ್ಷದ ಕಿರಿಯೆ ಪೇಟೊಂಗ್ಟರ್ನ್ ಪ್ರಧಾನಿ

01:33 AM Aug 17, 2024 | Team Udayavani |

ಬ್ಯಾಂಕಾಕ್‌: ಥೈಲ್ಯಾಂಡ್‌ನ‌ ನೂತನ ಪ್ರಧಾನಿಯಾಗಿ ಪೇಟೊಂಗ್ಟರ್ನ್ ಶಿನವಾತ್ರ ಅವರನ್ನು ನೇಮಿಸಲಾ­ಗಿದೆ. 37 ವರ್ಷದ ಅವರು ದೇಶದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ಅವರು ಕುಟುಂಬ ಸದಸ್ಯದಲ್ಲಿ ಪ್ರಧಾನಿ ಹುದ್ದೆಗೆ ಏರಿದ 3ನೇ ಸದಸ್ಯೆಯಾಗಿ­ದ್ದಾರೆ.

Advertisement

2023 ರಲ್ಲಿ ನಡೆದಿದ್ದ ಥೈಲ್ಯಾಂಡ್‌ ಸಂಸತ್‌ ಚುನಾ­ವಣೆ ಪ್ರಚಾರದ ವೇಳೆ, ಹಾಲಿ ಪ್ರಧಾನಿ ಗರ್ಭಿಣಿ­ಯಾಗಿದ್ದರೂ ತಮ್ಮ ಪಕ್ಷ ಫ್ಯೂ ಥಾಯ್‌ ಪಾರ್ಟಿಯ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಕೆಲವು ದಿನಗಳ ಹಿಂದಷ್ಟೇ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದ ಶ್ರೆತ್ತಾ ತವಿಸಿನ್‌ ಅವರನ್ನು ಭ್ರಷ್ಟಾಚಾ­ರದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತೆಗೆದು ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next