Advertisement
ತನ್ನ ದೇಶದವರೇ ಆದ ಎಚ್.ಎಸ್. ಪ್ರಣಯ್ ವಿರುದ್ಧ ಅಮೋಘ ಗೆಲುವು ದಾಖಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದ 21ರ ಹರೆಯದ ಮೈರಾಬ ಅವರು ದ್ವಿತೀಯ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮ್ಯಾಡ್ಸ್ ಕ್ರಿಸ್ಟೋಪರ್ಸನ್ ಅವರನ್ನು 21-14, 22-20 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮೈರಾಬ ಅವರು ಈ ಹಿಂದೆ 2022ರಲ್ಲಿ ಇರಾನ್ ಫಜ್ರ್ ಇಂಟರ್‌ನ್ಯಾಶನಲ್ ಮತ್ತು ಇಂಡಿಯಾ ಇಂಟರ್‌ನ್ಯಾಶನಲ್ ಕೂಟದ ಪ್ರಶಸ್ತಿ ಜಯಿಸಿದ್ದರು. ಮುಂದಿನ ಸುತ್ತಿನಲ್ಲಿ ಅವರು ಸ್ಥಳೀಯ ಹೀರೊ ಮತ್ತು ವಿಶ್ವ ಚಾಂಪಿಯನ್ ಕುನ್ಲಾವುಟ್ ವಿಟಿಡ್ಸಾಮ್ ಅವರನ್ನು ಎದುರಿಸಲಿದ್ದಾರೆ.
Related Articles
Advertisement
ಮಿಕ್ಸೆಡ್ ಡಬಲ್ಸ್‌ನಲ್ಲಿ ಸತೀಶ್ ಕರುಣಾಕರನ್ ಮತ್ತು ಆದ್ಯ ವರಿಯತ್ ಅವರು ರಿನೋವ್ ರಿವಾಲ್ಡಿ ಮತ್ತು ಪಿಥ ಹನಿಂಗ್‌ತ್ಯಾಸ್ ಮೆಂತರಿ ಅವರಿಗೆ 10-21, 17-21 ಗೇಮ್‌ಗಳಿಂದ ಸೋತು ಹೊರಬಿದ್ದರು.