Advertisement
ಮೊದಲ ಗೇಮ್‌ನಲ್ಲಿ 4-2ರಿಂದ ಮುಂದಿದ್ದ ಸಾತ್ವಿಕ್-ಚಿರಾಗ್, ಬ್ರೇಕ್ ವೇಳೆ ಬಹುತೇಕ ಸಮಬಲ ಸ್ಥಿತಿಗೆ ಬಂದಿದ್ದರು (10-11). ಬಳಿಕ 15-16ರ ತನಕವೂ ಸ್ಪರ್ಧೆ ಇದೇ ಲಯದಲ್ಲಿ ಸಾಗಿತು. ಈ ಹಂತದಲ್ಲಿ ಮಲೇಷ್ಯಾ ಜೋಡಿ ಸತತ 4 ಅಂಕ ಗಳಿಸಿ ಮೇಲುಗೈ ಸಾಧಿಸಿತು. ದ್ವಿತೀಯ ಗೇಮ್‌ನಲ್ಲೂ ಭಾರತೀಯ ಜೋಡಿ 3-1ರ ಆರಂಭಿಕ ಮೇಲುಗೈ ಪಡೆದಿತ್ತು. ಆಗ ಮಲೇಷ್ಯಾ ಶಟ್ಲರ್ ಸತತ 4 ಅಂಕ ಬುಟ್ಟಿಗೆ ಹಾಕಿಕೊಂಡರು. ಪಟ್ಟು ಸಡಿಲಿಸದ ಸಾತ್ವಿಕ್-ಚಿರಾಗ್ 8-8 ಸಮಬಲಕ್ಕೆ ಬಂದರು. ವಿರಾಮದ ವೇಳೆ ಎದುರಾಳಿ ಜೋಡಿ 3 ಅಂಕಗಳ ಮುನ್ನಡೆ ಹೊಂದಿತು. ಬಳಿಕ ಇದೇ ಲಯದಲ್ಲಿ ಸಾಗಿ ಪಂದ್ಯವನ್ನು ವಶಪಡಿಸಿಕೊಂಡಿತು. Advertisement
ಥಾಯ್ಲೆಂಡ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್‌ಗೆ ಸೋಲು
11:43 PM Jan 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.