ಬ್ಯಾಂಕಾಕ್: “ಥಾಯ್ಲೆಂಡ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್’ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್ ಪರಾಭವಗೊಳ್ಳುವುದರೊಂದಿಗೆ ಭಾರತದ ಹೋರಾಟ ಅಂತ್ಯಗೊಂಡಿತು.
Advertisement
ಶುಕ್ರವಾರದ ಜಿದ್ದಾಜಿದ್ದಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ. 23 ಆಟಗಾರ ಚೀನದ ಲಿ ಶಿ ಫೆಂಗ್ ವಿರುದ್ಧ ಸಾಯಿ ಪ್ರಣೀತ್ 17-21, 23-21, 18-21 ಅಂತರದಿಂದ ಸೋಲು ಕಂಡರು.