Advertisement
ಸಮೀರ್ ಮಲೇಶ್ಯದ ಲೀ ಜೀ ಜಿಯ ವಿರುದ್ಧ 16-21, 15-21 ನೇರ ಗೇಮ್‌ಗಳಿಂದ ಸೋತು ಕೂಟದಿಂದ ಹೊರಬಿದ್ದರು. ಈ ಸೋಲಿನೊಂದಿಗೆ ಸಮೀರ್ ಒಂದೇ ತಿಂಗಳಲ್ಲಿ ಜಿಯಾ ವಿರುದ್ಧ ಎರಡು ಬಾರಿ ಸೋಲನುಭವಿಸಿದಂತಾಯಿತು. ಈ ಹಿಂದೆ ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸಮೀರ್ ಸೋಲುಂಡಿದ್ದರು.
ಐದನೇ ಶ್ರೇಯಾಂಕದ ಸೈನಾ ಸತತ ಎರಡನೇ ಬಾರಿ ಮೊದಲ ಸುತ್ತಿನಲ್ಲಿ ಸೋತು ನಿರಾಶೆ ಮೂಡಿಸಿದ್ದಾರೆ. ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಅವರು ಡೆನ್ಮಾರ್ಕ್‌ನ ಲಿನ್ ಹೋಜ್ಮಾರ್ಕ್ ಜಾರ್ಸ್‌ಫೆಲ್ಡ್ ಅವರಿಗೆ 13-21, 21-17, 15-21 ಅಂತರದಿಂದ ಶರಣಾದರು. ಈ ಹೋರಾಟ 47 ನಿಮಿಷದ ವರೆಗೆ ಸಾಗಿತ್ತು. ಈ ಸೋಲಿನಿಂದ ಥಾಯ್ಲೆಂಡ್ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸೈನಾ ಕಳೆದ ವಾರ ನಡೆದ ಇಂಡೋನೇಶ್ಯ ಮಾಸ್ಟರ್ ಕೂಟದ ಮೊದಲ ಸುತ್ತಿನಲ್ಲಿ ಸೋತಿದ್ದರು. ಅದಕ್ಕಿಂತ ಮೊದಲು ಮಲೇಶ್ಯ ಮಾಸ್ಟರ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು.