ಮೈಸೂರು: ಕೋವಿಡ್ ತಡೆ ಜತೆಗೆ ಪಾಸಿಟಿವ್ ಬಂದಿರುವ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ತಪಾಸಣೆಗೊಳಪಡಿಸುತ್ತೇವೆ. ಮೇ ಅಂತ್ಯದೊಳಗೆ ರಾಜ್ಯದ 30 ಜಿಲ್ಲೆಗಳಲ್ಲೂ ತಲಾ 2 ಕೋವಿಡ್ ಪರೀಕ್ಷೆ ಲ್ಯಾಬ್ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಜಮಾತ್‌ನ ತಬ್ಲಿ , ಜ್ಯುಬಿಲಿಯಂಟ್‌ನಿಂದ ಶೇ.60ರಷ್ಟು ಪ್ರಕರಣವಾಗಿದೆ.
ಈಗ ವಿಜಯಪುರ, ಬಳ್ಳಾರಿ, ಕಲಬುರ್ಗಿಯಲ್ಲಿ ಕಾಣಿಸಿಕೊಂಡಿರುವುದು ತಬ್ಲಿ ಯಿಂದಲೇ ಆಗಿದೆ. ನಮ್ಮಲ್ಲಿ ಮೊದಲು ಎರಡು ಲ್ಯಾಬ್ ಇತ್ತು. ಈಗ ಹದಿನೇಳಾಗಿದೆ. ಮೇ
ಅಂತ್ಯದೊಳಗೆ 30 ಜಿಲ್ಲೆಯಲ್ಲೂ 60 ಲ್ಯಾಬ್ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಲಾಕ್‌ಡೌನ್ ಪರಿಹಾರವಲ್ಲ: ಸೋಂಕು ತಡೆಗೆ ಲಾಕ್‌ಡೌನ್ ಪರಿಹಾರವಲ್ಲ. ಲಾಕ್ ಡೌನ್ ವಿಸ್ತರಿಸುತ್ತ ಹೋದಂತೆ ಜೀವ ಉಳಿಯುತ್ತದೆ. ಆದರೆ ಜೀವನ ಇರುವುದಿಲ್ಲ. ಹಾಗಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಔಷಧ, ವ್ಯಾಕ್ಸಿನ್ ಕೊರತೆ ಇಲ್ಲ ಎಂದರು.
1500 ವೆಂಟಿಲೇಟರ್‌ಗೆ ಆರ್ಡರ್: ರಾಜ್ಯದ 17 ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಸೇರಿ 1500 ವೆಂಟಿಲೇಟರ್ ಖರೀದಿಗೆ ಆರ್ಡರ್ ಕೊಡಲಾಗಿದೆ. ಮೈಸೂರಿನಲ್ಲಿ 17 ವೆಂಟಿಲೇಟರ್ ಇದೆ. ಕೋವಿಡ್ ಬಂದ ತಕ್ಷಣ ವೆಂಟಿಲೇಟರ್ ಅಗತ್ಯವಿಲ್ಲ. ಶೇ.5ರಿಂದ 10ರಷ್ಟು ಮಂದಿ ಐಸಿಯುಗೆ ಸ್ಥಳಾಂತರ ಮಾಡಿದರೂ ಶೇ.1ರಿಂದ 2.5ರಷ್ಟು ವೆಂಟಿಲೇಟರ್ ಬಳಕೆಯಾಗುತ್ತದೆ. ಕೋವಿಡ್ ಬಂದಾಕ್ಷಣ ವೆಂಟಿಲೇಟರ್ ಬಳಸಬೇಕು ಎನ್ನುವುದು ತಪ್ಪು ಗ್ರಹಿಕೆ. ರಾಜ್ಯದಲ್ಲಿ ಟೆಲಿ ಮೆಡಿಷನ್ ಮಾಡಿದ್ದೇವೆ. ಹತ್ತು ಫ್ಯಾಕಲ್ಟಿ ಸೇರಿ ನುರಿತ ತಜ್ಞರು ಟೆಲಿ ಐಸಿಯುನಲ್ಲಿ ಕೂತು ಟೆಲಿ ಮೆಡಿಷನ್ ಬಗ್ಗೆ ಸಲಹೆ ಕೊಡುತ್ತಾರೆ. ರೋಗಿ ತನ್ನ ಸಮಸ್ಯೆ ಹೇಳಿದಾಗ ಟೆಲಿ ಮೆಡಿಷನ್ ಮೂಲಕವೇ ಏನು ಮಾಡಬೇಕು ಎಂಬುದನ್ನು ತಿಳಿಸುತ್ತಾರೆ. ಇದರಿಂದಾಗಿ ವೈದ್ಯರು ಅಂತರ ಕಾಪಾಡಲು ಸಹಕಾರಿಯಾಗಿದೆ ಎಂದರು.
ಸಭೆಯಲ್ಲಿ ಸಚಿವ ಎಸ್ .ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್ .ನಾಗೇಂದ್ರ, ಹರ್ಷವರ್ಧನ್, ಸಿ.ಎಸ್ .ನಿರಂಜನಕುಮಾರ್, ಎಂ.ಅಶ್ವಿನ್‌ಕುಮಾರ್, ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ, ಡೀಸಿ ಅಭಿರಾಮ್ ಜಿ.ಶಂಕರ್ ಹಾಜರಿದ್ದರು.