Advertisement

ಐಸಿಸಿ ರಾಂಕಿಂಗ್ ನಲ್ಲಿ ಸ್ಮಿತ್ ಸನಿಹಕ್ಕೆ ಕೊಹ್ಲಿ, ಮಯಾಂಕ್ ನೆಗೆತ

09:48 AM Nov 28, 2019 | Team Udayavani |

ದುಬೈ:  ನೂತನ ಟೆಸ್ಟ್ ರಾಂಕಿಂಗ್ ನ್ನು ಐಸಿಸಿ ಬಿಡುಗಡೆ ಮಾಡಿದ್ದು, ಮೊದಲ ಸ್ಥಾನದಲ್ಲಿರುವ ಸ್ಟೀವನ್ ಸ್ಮಿತ್ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ನಡುವಿನ ಅಂತರ ಕಡಿಮೆಯಾಗಿದೆ.

Advertisement

ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲು ಸ್ಮಿತ್ ಮತ್ತು ಕೊಹ್ಲಿ ನಡುವೆ 25 ಅಂಕಗಳ ವ್ಯತ್ಯಾಸವಿದ್ದು, ಕೊಹ್ಲಿ ಶತಕದ ಕಾರಣದಿಂದಾಗಿ ಈ ಅಂತರ ಕೇವಲ ಮೂರು ಅಂಕಗಳಿಗೆ ಇಳಿದಿದೆ.

ಸದ್ಯ ಸ್ಟೀವ್ ಸ್ಮಿತ್ 931 ಅಂಕ ಹೊಂದಿದ್ದರೆ, ಎರಡನೆ ಸ್ಥಾನದಲ್ಲಿರುವ ವಿರಾಟ್ 928 ಅಂಕ ಹೊಂದಿದ್ದಾರೆ.

ಕರ್ನಾಟಕದ ಮಯಾಂಕ್ ಅಗರ್ವಾಲ್ ಇದೇ ಮೊದಲ ಬಾರಿಗೆ ಟಾಪ್ 10 ಒಳಗೆ ಕಾಲಿರಿಸಿದ್ದು, 10ನೇ ಸ್ಥಾನದಲ್ಲಿದ್ದಾರೆ. ಇದು ಅವರ ಜೀವನ ಶ್ರೇಷ್ಠ ರಾಂಕಿಂಗ್.

ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕೂಡಾ ಒಂದು ಸ್ಥಾನ ಮೇಲೇರಿ ಒಂಬತ್ತನೇ ಸ್ಥಾನಕ್ಕೇರಿದ್ದಾರೆ.

Advertisement

ಪಾಕ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭರ್ಜರಿ 185 ರನ್ ಬಾರಿಸಿದ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೇನೆ ಅವರು ಕೂಡಾ 14ನೇ ಸ್ಥಾನಕ್ಕೇರಿದರು. ಬಹಳ ಕಾಲದ ನಂತರ ಟೆಸ್ಟ್ ಶತಕ ಬಾರಿಸಿದ ಡೇವಿಡ್ ವಾರ್ನರ್ ಅವರು 17ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next