Advertisement

Tesla; ಈ ರೋಬೋ ಮಾತಾಡುತ್ತೆ, ಮಕ್ಕಳನ್ನೂ ಆರೈಕೆ ಮಾಡುತ್ತೆ!

01:51 AM Oct 13, 2024 | |

ಕ್ಯಾಲಿಫೋರ್ನಿಯಾ: ಇದು ರೋಬೋ ಯುಗ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಇದೆ. ಎಐ ತಂತ್ರಜ್ಞಾನದಿಂದ ಇಂದು ಅನೇಕ ಬದಲಾವಣೆ ಗಳಾಗುತ್ತಿವೆ. ಜತೆಗೆ ಈಗ ರೋಬೋಗಳು ಸಹ ಮನುಷ್ಯ ರಂತೆಯೇ ಪಕ್ಕಾ ಕೆಲಸ ಮಾಡಲು ಸಿದ್ಧವಾಗಿವೆ. ಈ ರೋಬೋಗಳು ನಿಮಗೆ ಸರ್ವ್‌ ಮಾಡುತ್ತವೆ, ಡಾನ್ಸ್‌ ಮಾಡುತ್ತವೆ, ಅಷ್ಟೇ ಏಕೆ ನಿಮ್ಮ ಜತೆಗೆ ಸೆಲ್ಫಿಯನ್ನೂ ತೆಗೆದುಕೊಳ್ಳುತ್ತದೆ.

Advertisement

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎಲಾನ್‌ ಮಸ್ಕ್ ಅವರ ಟೆಸ್ಲಾ ಕಂಪೆನಿ ಇತ್ತೀಚೆಗೆ ರೋಬೋಗಳ ಪ್ರದರ್ಶನ ಹಾಗೂ ರ್‍ಯಾಂಪ್‌ ವಾಕ್‌ ಏರ್ಪಡಿಸಿತ್ತು. ಅಲ್ಲಿ ತನ್ನ ರೋಬೋವನ್ನು ಅನಾವರ ಣಗೊಳಿಸಿ ಮಾತನಾಡಿದ ಟೆಸ್ಲಾ ಸಿಇಒ ಮಸ್ಕ್, ಇವು ನಿಮಗೆ ಬೇಕಾದ್ದನ್ನು ಮಾಡುತ್ತದೆ. ಶಿಕ್ಷಕ, ಶಿಶುಪಾಲಕ, ಸ್ನೇಹಿತನಾಗಿ, ಅತ್ಯುತ್ತಮ ಸರ್ವರ್‌ ಆಗಿಯೂ ಸೇವೆ ಸಲ್ಲಿಸುವ ಸಾಮ ರ್ಥ್ಯ ಹೊಂದಿದೆ ಎಂದಿದ್ದಾರೆ. ಅಲ್ಲದೆ ಅಡುಗೆ ಮನೆ ಸ್ವತ್ಛ ಗೊಳಿಸುವ ಕಾರ್ಯವನ್ನೂ ಇದು ಮಾಡಿದೆ. ಇನ್ನು ಈ ಇವೆಂಟ್‌ನಲ್ಲಿ ರೋಬೋಗಳು ಗ್ರಾಹಕರಿಗೆ ಪಾನೀಯ ಗಳನ್ನು ಸರ್ವ್‌ ಮಾಡಿವೆ. ಅವರಿಗೆ ಹಸ್ತಲಾಘವ ಮಾಡಿವೆ. ಇದಕ್ಕೆ 17ರಿಂದ 25 ಲಕ್ಷ ರೂ.ವರೆಗೆ ವೆಚ್ಚವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next