ನವ ದೆಹಲಿ : ಯು ಎಸ್ ಮೂಲದ ಎಲೆಕ್ಟ್ರಿಕ್ ಕಾರ್ ತಯಾರಕ ಸಂಸ್ಥೆ ಟೆಸ್ಲಾ ಇಂಕ್ ಈ ವರ್ಷ ಭಾರತೀಯ ಕಾರು ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಕಂಪನಿಯು ಈಗಾಗಲೇ ತನ್ನ ಭಾರತೀಯ ಅಂಗಸಂಸ್ಥೆಯಾದ ಬೆಂಗಳೂರಿನ ಶಾಖೆಯೊಂದಿಗೆ ತನ್ನ ಮೊದಲ ಹಂತದ ಕಾರ್ಯವಿಧಾನಗಳನ್ನು ಪೂರೈಸಿದೆ. ಮತ್ತು ಬೆಂಗಳೂರಿನ ಕಾರು ಉತ್ಪಾದಕ ಘಟಕವನ್ನು ಟೆಸ್ಲಾ ಮಾಡೆಲ್ 3 ನೊಂದಿಗೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಓದಿ : ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಗ್ಲಾಮರಸ್ ಲುಕ್ಸ್
ಟೆಸ್ಲಾ ಮಾಡೆಲ್ ಎಸ್ ಸೌಲಭ್ಯಗಳೇನು..?
ಕಾರ್ಯಕ್ಷಮತೆ: ಟೆಸ್ಲಾ ಮಾಡೆಲ್ ಎಸ್ ಅನ್ನು ಪರ್ಫಾರ್ಮೆನ್ಸ್ ಮತ್ತು ಲಾಂಗ್ ರೇಂಜ್ ಪ್ಲಸ್ ಎಂಬ ಎರಡು ನೀಡಲಾಗುತ್ತಿದ್ದು, ಇವು ಎರಡು ಡ್ಯುಯಲ್ ಎಲೆಕ್ಟ್ರಿಕ್ ಮೋಟರ್ ಗಳೊಂದಿಗೆ ಬಿಡುಗಡೆಗೊಳ್ಳಲಿವೆ. ಇವು ಎಕ್ಸೆಲ್ ನ್ನು ಹೊಂದಿರಲಿದ್ದು, ಡಿಜಿಟಲ್ ಮತ್ತು ಸ್ವತಂತ್ರವಾಗಿ ಮುಂಭಾಗ ಮತ್ತು ಹಿಂಭಾಗದ ಟಯರ್ ಗಳಿಗೆ ಟಾರ್ಕ್ ಅನ್ನು ನಿಯಂತ್ರಿಸುತ್ತದೆ. ಎಲೆಕ್ಟ್ರಿಕ್ ಮೋಟರ್ ಗಳಿಂದ ಸಂಯೋಜಿತಗೊಳ್ಳುವ ಉತ್ಪಾದನೆಯು 615 ಕಿ.ವ್ಯಾ (825 ಬಿ ಹೆಚ್ ಪಿ) ಮತ್ತು 1,300 ಎನ್‌ಎಂ ವರೆಗೆ ಇರುತ್ತದೆ. ಪರ್ಫಾರ್ಮೆನ್ಸ್ ಟ್ರಿಮ್ 2.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯತುತ್ತದೆ. ಆದರೆ ಲಾಂಗ್ ರೇಂಜ್ ಪ್ಲಸ್ ಮಾಡೆಲ್ 3.8 ಸೆಕೆಂಡುಗಳಲ್ಲಿ ವೇಗವನ್ನು ಪಡೆಯುತ್ತದೆ.
ಬ್ಯಾಟರಿ ಸಾಮರ್ಥ್ಯ : ಟೆಸ್ಲಾ ಮಾಡೆಲ್ ಎಸ್ ಕಾರುಗಳು 60 ಕಿಲೋವ್ಯಾಟ್ ನಿಂದ 90 ಕಿಲೋವ್ಯಾಟ್ ವರೆಗಿನ ಬ್ಯಾಟರಿಗಳನ್ನು ಹೊಂದಿರಲಿವೆ. ಪರ್ಫಾರ್ಮೆನ್ಸ್ ಮಾಡೆಲ್ ನಲ್ಲಿ ಒಮ್ಮೆ ಚಾರ್ಚ್ ಆದ ಬ್ಯಾಟರಿಯ ಸಹಾಯದಿಂದ 623 ಕಿಲೋ ಮೀಟರ್ ತನಕ ಹೋಗಬಹುದಾಗಿದೆ. ಲಾಂಗ್ ರೇಂಜ್ ಪ್ಲಸ್ ಟ್ರಿಮ್ ಮಾಡೆಲ್ ಕಾರಿನ ಬ್ಯಾಟರಿಯ ಸಹಾಯದಿಂದ ಒಮ್ಮೆ ಮಾಡಿದ ಚಾರ್ಜ್‌ನಲ್ಲಿ 647 ಕಿಲೋಮೀಟರ್ ತನಕ ಹೋಗಬಹುದಾಗಿದೆ. ಈ ಕಾರು ಆನ್ ಬೋರ್ಡ್ ಚಾರ್ಜರ್ ನೊಂದಿಗೆ ಗರಿಷ್ಠ 11.5 ಕಿ.ವ್ಯಾ ಸಾಮರ್ಥ್ಯವನ್ನು ಹೊಂದಿರಲಿದೆ. ಇದು 6 ರಿಂದ 9 ಗಂಟೆಗಳಲ್ಲಿ ಶೇಕಡಾ 100ರಷ್ಟು ಚಾರ್ಜ್ ಆಗುತ್ತದೆ.
ಟೆಸ್ಲಾ ಕಾರಿನ ವಿನ್ಯಾಸ: ಟೆಸ್ಲಾ ಮಾಡೆಲ್ ಎಸ್ ಕಾರು ಸ್ಪೋರ್ಟಿ ಪ್ರೊಫೈಲ್ ನೊಂದಿಗೆ ಉತ್ತಮವಾದ ವಿನ್ಯಾಸವನ್ನು ಹೊಂದಿರಲಿದೆ. ಎಲ್ ಇ ಡಿ ಹೆಡ್ಲ್ಯಾಂಪ್ ಗಳನ್ನು ಹೊಂದಲಿರುವ ಕಾರು, ಗುಣಮಟ್ಟದ ಡಾರ್ಕ್ ಗ್ಲಾಸ್ ನ ರೂಫನ್ನು ಒಳಗೊಂಡಿರುತ್ತದೆ. ಹಿಂಭಾಗದಲ್ಲಿ, ಕಾರು ಎಲ್ ಇಡಿ ಟೈಲ್ ಲ್ಯಾಂಪ್ ಗಳು, ಬೂಟ್-ಮೌಂಟೆಡ್ ಸ್ಪಾಯ್ಲರ್ ಮತ್ತು ಹಿಂಭಾಗದ ಡಿಫ್ಯೂಸರ್ ನೊಂದಿಗೆ ಅಂಡರ್ ಬಾಡಿ ಕ್ಲಾಡಿಂಗ್ ನ್ನು ಒಳಗೊಂಡಿರಲಿದೆ.
ಓದಿ : ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ
ಆಂತರಿಕ ವಿನ್ಯಾಸಗಳು : ಮಾಡೆಲ್ ಎಸ್ 5 ಆಸನಗಳ ಕ್ಯಾಬಿನ್ ನೊಂದಿಗೆ ಸ್ಪೋರ್ಟಿ ಲುಕ್ ನ್ನು ಹೊಂದಿರುವ ಮುಂಭಾಗದ ಆಸನಗಳನ್ನು ಹೊಂದಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಸಂಪೂರ್ಣ ಡಿಜಿಟಲ್ ಆಗಿದೆ. ಅಷ್ಟಲ್ಲದೇ ನವೀಕೃತ ಓವರ್ ದಿ ಏರ್ (ಒಟಿಎ) ಸಾಫ್ಟ್‌ವೇರ್ ನ್ನು ಈ ಕಾರು ಹೊಂದಿರಲಿದೆ.
ಆಟೋಪಿಲೆಟ್ ಮತ್ತು ಸುರಕ್ಷತೆ: ಎಲ್ಲಾ ಟೆಸ್ಲಾ ಕಾರುಗಳಂತೆ, ಮಾಡೆಲ್ ಎಸ್ ಸಹ ಕಂಪನಿಯ ಆಟೊಪೈಲೆಟ್ ತಂತ್ರಜ್ಞಾನವನ್ನೊಳಗೊಂಡಿರಲಿದೆ. ಸಂಪೂರ್ಣ ಸ್ವಯಂಚಾಲಿತ ಕಾರ್ಯವು ಕಾರಿನ ಲೇನ್ ಗಳನ್ನು ಬದಲಾಯಿಸಲು, ಆಟೋ ಪಾರ್ಕ್ ಮಾಡಲು ಸಹಾಯ ಮಾಡುತ್ತದೆ. ಸಮನ್ಸ್ ವೈಶಿಷ್ಟ್ಯವನ್ನು ಹೊಂದಿರುವ ಕಾರಣದಿಂದಾಗಿ ಮಾಲಿಕರು ಎಲ್ಲಿ ಪಾರ್ಕಿಂಗ್ ಮಾಡಲಾಗಿದೆ ಎಂಬುವುದನ್ನು ಕೂಡಲೇ ಕಂಡುಹಿಡಿಯಬಹುದಾಗಿದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಟೆಸ್ಲಾ ಮಾಡೆಲ್ ಎಸ್ ಕಾರನ್ನು ಅತ್ಯಂತ ಸುರಕ್ಷಿತ ಕಾರು ಎಂದು ಕಂಪೆನಿ ಭರವಸೆ ನೀಡುತ್ತಿದೆ.
ಓದಿ : ಆನ್ಲೈನ್ ನಲ್ಲಿ ಸೋರಿಕೆಯಾಯ್ತು ಒನ್ ಪ್ಲಸ್ 9 ಫೋನ್ ನ ಚಿತ್ರ..!