Advertisement

ಭದ್ರತಾ ಪಡೆ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ: ಕಾರ್ಯಾಚರಣೆ ಆರಂಭ

06:25 AM Mar 21, 2019 | Team Udayavani |

ಶ್ರೀನಗರ: ಗಡಿ ರಾಜ್ಯ ಜಮ್ಮು ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಉಗ್ರರು ಭದ್ರತಾ ಪಡೆಯ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು, ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆ ಆರಂಭವಾಗಿದೆ. 

Advertisement

ಉಗ್ರರ ಗ್ರೆನೇಡ್ ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ದಾಳಿ ನಡೆದ ಕೂಡಲೇ ರಕ್ಷಣಾ ಪಡೆ ಉಗ್ರರನ್ನು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿದೆ. 

ಗ್ರೆನೇಡ್ ದಾಳಿ ನಡೆದ ಸಮಯದಲ್ಲೇ ನೌಶೇರಾ ಪ್ರಾಂತ್ಯದಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿದ್ದು, ಗಡಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next