Advertisement

ಶೋಪಿಯಾನ್‌ನಲ್ಲಿ  ಐವರು ಉಗ್ರರು ಫಿನಿಶ್‌ ; ಮುಂದುವರಿದ ಕಾರ್ಯಾಚರಣೆ 

09:42 AM Aug 04, 2018 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಕಿಲ್ಲೋರಾ ಎಂಬಲ್ಲಿ ಶುಕ್ರವಾರ ಸಂಜೆಯಿಂದ ಸೇನಾಪಡೆಗಳು ಆರಂಭಿಸಿದ ಭಾರೀ ಕಾರ್ಯಾಚರಣೆ ಮುಂದುವರಿದಿದ್ದು , ಶನಿವಾರ ಬೆಳಗ್ಗೆ  ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ. 

Advertisement

ಶುಕ್ರವಾರ ರಾತ್ರಿ ಲಷ್ಕರ್‌-ಇ ತೋಯ್ಬಾಗೆ ಸೇರಿದ  ಉಮರ್‌ ಮಲೀಕ್‌ ಎಂಬ ಉಗ್ರನನ್ನು ಹೊಡೆದುರುಳಿಸಿ ಎಕೆ 47 ವಶಕ್ಕೆ ಪಡೆಯಲಾಗಿತ್ತು. 

ಪ್ರದೇಶದಲ್ಲಿ ಇನ್ನು ಕೆಲ ಉಗ್ರರು ಅಡಗಿರುವ ಶಂಕೆಯಲ್ಲಿ ಭಾರೀ ಕಾರ್ಯಾಚರಣೆ ಮುಂದುವರಿದಿದೆ. 

ಬರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸ ಲಾಗಿತ್ತು. ಕಾರ್ಯಾಚರಣೆ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next