Advertisement

ಉಗ್ರರಿಂದ ಮಹಿಳಾ ಅಸ್ತ್ರ

06:59 AM Nov 17, 2018 | Team Udayavani |

ಶ್ರೀನಗರ: ದಶಕಗಳ ಹಿಂದೆ ಉಗ್ರವಾದದ ಹೆಸರಿನಲ್ಲಿ ನಡೆಯುತ್ತಿದ್ದ ರಕ್ತಪಾತಕ್ಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದ ಉಗ್ರವಾದಿಗಳ ಹೇಯಕೃತ್ಯ ಕಣಿವೆ ನಾಡಿನಲ್ಲಿ ಮರುಕಳಿಸಿದೆ. ಅದಕ್ಕೆ ಸಾಕ್ಷ್ಯವೆಂಬಂತೆ, ಇಲ್ಲಿನ ಲವಾಯೊರಾ ಪ್ರಾಂತ್ಯದ ಹೆದ್ದಾರಿಯೊಂದರಲ್ಲಿ ಸೈಮಾ ಎಂಬ ಮಹಿಳೆಯೊಬ್ಬರು ತಾವಿದ್ದ ವಾಹನದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದ್ದುದು
ಪತ್ತೆಯಾಗಿದೆ.

Advertisement

ಮಹಿಳೆಯರನ್ನು “ಶಸ್ತ್ರಾಸ್ತ್ರ, ಸ್ಫೋಟಕ ಸಾಗಣೆದಾರ’ರನ್ನಾಗಿ ಬಳಸುವ ತಂತ್ರಕ್ಕೆ ಈಗ ಉಗ್ರರು ಮೊರೆಹೋಗಿರುವುದು ಭದ್ರತಾ
ಪಡೆಗಳಿಗೆ ತಲೆನೋವು ಉಂಟುಮಾಡಿದೆ. ಮಂಗಳವಾರ ಮಧ್ಯಾಹ್ನ, ತನಗಿರುವ ಚರ್ಮದ ಸೋಂಕನ್ನು ವೈದ್ಯರಿಗೆ ತೋರಿಸಿ ಔಷಧಿ
ತರುವುದಾಗಿ ಹೇಳಿ ಮನೆಯಿಂದ ತೆರಳಿದ್ದ 29ರ ಪ್ರಾಯದ ಸೈಮಾ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳೊಂದಿಗೆ ಸಿಕ್ಕಿ ಹಾಕಿ ಕೊಂಡಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಇಬ್ಬರು ಸಹೋದರರೂ ಪೊಲೀಸ್‌ ಅತಿಥಿಗಳಾಗಿರುವುದು ಆ ಕುಟುಂಬಕ್ಕೆ ಮತ್ತೂಂದು ಶಾಕ್‌ ನೀಡಿದೆ.

ಸೈಮಾ ಬಳಿಯಿಂದ 20 ಗ್ರೆನೇಡ್‌ಗಳು, 365 ಬುಲೆಟ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಡಿ
ನಿಯಂತ್ರಣ ರೇಖೆಯ ಮೂಲಕ ಆಗಮಿಸಿದ ಶಸ್ತ್ರಾಸ್ತ್ರಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಸಾಗಿಸಲು ಮಹಿಳೆಯರನ್ನು ಬಳಸಿಕೊಳ್ಳು ತ್ತಿರುವುದು ಇದರಿಂದ ಬೆಳಕಿಗೆ ಬಂದಿದೆ ಎಂದೂ ಅವರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಇವರು ಹಿಜ್ಬುಲ್‌ ಕಮಾಂಡರ್‌ನ ಮಕ್ಕಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next