Advertisement
ಇಡೀ ವಿಶ್ವದಲ್ಲಿ ಇಸ್ಲಾಂ ಧರ್ಮವನ್ನು ಪ್ರತಿಷ್ಠಾಪಿಸುವ ಭರದಲ್ಲಿ ಜಿಹಾದಿ ಅಮಲೇರಿಸಿಕೊಂಡು ಬಂದವರು ಇವರು. ಆದರೆ, ಕೊನೆ ಗೇನಾಯಿತು? ಇಲ್ಲಿ ಬಂದು ಹೆಣವಾದರು. ಅಷ್ಟೇ ಅಲ್ಲ, ಭಾರತದಂತಹ ದೇಶಗಳಿಂದ ಜಿಹಾದಿಗಳಾಗಲು ಬರುವವರಿಗೆ “ಪಾಠ’ವಾದರು.
ಈ ದಾಳಿಗಳಲ್ಲಿ ಈವರೆಗೆ ಬರೋಬ್ಬರಿ 80 ಸಾವಿರ ಜಿಹಾದಿಗಳು ಸಾವನ್ನಪ್ಪಿದ್ದಾರೆ. ಇವರು ಯಾವ ದೇಶದವರೆಂದು ಗೊತ್ತಿಲ್ಲ. ಈ ಮೃತದೇಹಗಳ ಹೆಸರೇನು, ಐಡೆಂಟಿಟಿಯೇನು ಎಂಬುದೂ ಗೊತ್ತಿಲ್ಲ. ಅವನ್ನು ಪತ್ತೆ ಮಾಡುವಷ್ಟು ಸಮಯವೂ ಇಲ್ಲ. ಹಾಗಾಗಿ, ಪ್ರತಿ ಬಾರಿ ಯುದ್ಧ ನಡೆದಾಗಲೂ ಉಗ್ರರ ಶವಗಳು ಕೊಳೆಯುವ ಮುನ್ನವೇ ಅವುಗಳನ್ನು ಬುಲ್ಡೋಜರ್ ಸಹಾಯದಿಂದ ದೊಡ್ಡ ಗುಂಡಿಗಳನ್ನು ತೆಗೆದು ಹೂಳಲಾಗುತ್ತಿದೆ. ಹಾಗಾಗಿ, ಸಿರಿಯಾ, ಇರಾಕ್‌ನ ಹಲ ವಾರು ಪ್ರಾಂತ್ಯಗಳಲ್ಲಿ ಎಲ್ಲೆಂದರಲ್ಲಿ ಇಂಥ ಸಾಮೂಹಿಕ ಗೋರಿಗಳೇ ಕಾಣುತ್ತವೆ ಎನ್ನುತ್ತವೆ ವರದಿಗಳು. ಈ ಬಗ್ಗೆ ಪ್ರತಿಕ್ರಿಯಿಸುವ ಪೊಲೀಸರು, “”ಶವಗಳು ಬೇಗ ಕೊಳೆತು ರೋಗ ರುಜಿನಗಳಿಗೆ ಕಾರಣವಾಗುವು ದರಿಂದ ಹೀಗೆ ಸಾಮೂಹಿಕ ಸಮಾಧಿ ಅನಿವಾರ್ಯ” ಎನ್ನುತ್ತಾರೆ. ಒಟ್ಟಿನಲ್ಲಿ, ಜಿಹಾದಿಗಳು ಯುದ್ಧದಲ್ಲಿ ಸತ್ತರೆ ಸ್ವರ್ಗ ಸಿಕ್ಕುತ್ತದೆ ಎಂಬ ಮಾತಿದೆ. ಆದರೆ, ಇಲ್ಲಿ ಸತ್ತವರು ಸ್ವರ್ಗಕ್ಕೆ ಹೋದರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಅಂತ್ಯ ಘನಘೋರವಾಗಿರುವುದಂತೂ ಅಪ್ಪಟ ಸತ್ಯ.