Advertisement

India promotes tolerance; ಭಯೋತ್ಪಾದನೆಗೆ  ಧರ್ಮವಿಲ್ಲ: ಅಜಿತ್‌ ದೋವಲ್‌

11:45 PM Jul 11, 2023 | Team Udayavani |

ಹೊಸದಿಲ್ಲಿ: ಭಯೋತ್ಪಾದನೆ ಎನ್ನುವುದು ಯಾವುದೇ ಧರ್ಮಗಳಿಗೆ ಸೀಮಿತವಾದದ್ದಲ್ಲ, ಯಾರು ಹಾದಿ ತಪ್ಪುತ್ತಾರೋ ಅಂಥವರು ಇಂಥ ಕೃತ್ಯ ಗಳಲ್ಲಿ ಭಾಗಿಯಾಗುತ್ತಾರೆಂದು ರಾಷ್ಟ್ರೀ ಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ.

Advertisement

ಇಂಡಿ ಯಾ-ಇಸ್ಲಾಮಿಕ್‌ ಕಲ್ಚರ್‌ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೋವಲ್‌ ಭಾಗಿಯಾಗಿದ್ದರು. ಈ ವೇಳೆ ಮಾತ ನಾಡಿದ ಅವರು, ಭಾರತವು ವಿವಿಧ ವಿಚಾರಗಳು, ಭಿನ್ನಾಭಿಪ್ರಾಯಗಳ ನಡುವೆ ಯೂ ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯವಸ್ಥೆಯನ್ನು ಹೊಂದಿದೆ.

ಇಲ್ಲಿ ಯಾವುದೇ ಧರ್ಮಗಳಿಗೂ ಬೆದರಿಕೆ ಇಲ್ಲ ಎಂದಿದ್ದಾರೆ. ಇನ್ನು ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಷ್ಟ್ರೀಯತೆ, ನಾಗರಿಕತೆ, ಧರ್ಮವನ್ನು ಗುರಿಯಾ ಗಿಸುವುದು ಸರಿಯಲ್ಲ. ಭಾರತದಲ್ಲಿ 200 ದಶಲಕ್ಷ ಮುಸ್ಲಿಮರಿದ್ದಾರೆ. ಆದರೆ ಜಾಗ ತಿಕ ಭಯೋತ್ಪಾದನೆಯಲ್ಲಿ ಭಾರತೀಯರ ಪಾಲಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next